ಕರ್ನಾಟಕ

ಎಂಎಲ್‌ಸಿ ಪುಟ್ಟಣ್ಣ ಅವರಿಗೂ ಕೊರೊನಾ ಪಾಸಿಟಿವ್..!

Pinterest LinkedIn Tumblr


ರಾಮನಗರ: ಕೊರೊನಾ ಮಹಾಮಾರಿ ದೇಶದ ಜನರ ನಿದ್ದೆಗೆಡಿಸಿರೋದಂತೂ ಸುಳ್ಳಲ್ಲ. ಒಂದು ಕಾಲದಲ್ಲಿ ಹಾದಿಬೀದಿಯಲ್ಲಿ ಬೇಕಾಬಿಟ್ಟಿ ಓಡಾಡ್ತಿದ್ದ ಜನರು ಈಗ ಅಂಗಳ ಇಳಿಯೋಕು ಮುನ್ನ ಹತ್ತು ಬಾರಿ ಯೋಚನೆ ಮಾಡ್ತಾರೆ. ಸಾರ್ವಜನಿಕ ಸ್ಥಳದಲ್ಲಿ ಓಡಾಡೋವಾಗ ಬಹುತೇಕ ಜನರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಾರೆ.

ಆದ್ರೆ ಕೆಲವೊಮ್ಮೆ ಎಷ್ಟೇ ಮುಂಜಾಗ್ರತೆ ವಹಿಸಿಕೊಂಡ್ರು ಈ ಮಹಾಮಾರಿ ನಮ್ಮನ್ನು ವಕ್ಕರಿಸಿಕೊಂಡು ಬಿಡುತ್ತೆ. ಸಂಪೂರ್ಣವಾಗಿ ಸುರಕ್ಷತಾ ಕ್ರಮಗಳನ್ನು ಅನುಸರಿಸೋ ವೈದ್ಯರನ್ನೂ ಕೊರೊನಾ ಬಿಟ್ಟಿಲ್ಲ. ಪೊಲೀಸರು, ರಾಜಕಾರಣಿಗಳಿಗೂ ಈ ವೈರಸ್‌ ದಾಳಿಯಿಟ್ಟಿದೆ. ಇದೀಗ ಈ ಸಾಲಿಗೆ ಎಂಎಲ್‌ಸಿ ಪುಟ್ಟಣ್ಣ ಅವರು ಸೇರ್ಪಡೆಯಾಗಿದ್ದಾರೆ.

ರಾಜ್ಯದ ರಾಜಕಾರಣಿಯಾಗಿರೋ ಎಂಎಲ್‌ಸಿ ಪುಟ್ಟಣ್ಣ ಅವರಿಗೆ ಕೊರೊನಾ ಸೋಂಕು ತಗುಲಿದ್ದು ಈ ಬಗ್ಗೆ ಸ್ವತಃ ಅವರೇ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ‘ನಾಲ್ಕು ದಿನಗಳ ಹಿಂದೆ ನನಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ನಾನು ಕ್ವಾರೆಂಟೈನ್‌ನಲ್ಲಿದ್ದೆ. ಗುರುವಾರ ಕೋವಿಡ್‌ ತಪಾಸಣೆ ಮಾಡಿಸಿಕೊಂಡಿದ್ದು, ನನ್ನ ವರದಿ ಪಾಸಿಟಿವ್‌ ಬಂದಿದೆ’ ಎಂದು ಪುಟ್ಟಣ್ಣ ಹೇಳಿದ್ದಾರೆ.

ಇನ್ನು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದಿರುವ ಎಂಎಲ್‌ಸಿ ಪುಟ್ಟಣ್ಣ ಅವರು, ಬೇಗ ಗುಣಮುಖನಾಗಿ ಹೊರಬರುತ್ತೇನೆ. ದಯವಿಟ್ಟು ಎಲ್ಲರೂ ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಸರ್ಕಾರದ ನೀತಿ ನಿಯಮಗಳನ್ನು ಪಾಲಿಸಿ ಎಂದು ಮನವಿ ಮಾಡಿದ್ದಾರೆ. ಸದ್ಯ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರ ಸಂಪರ್ಕದಲ್ಲಿದ್ದವರನ್ನು ಕ್ಯಾರೆಂಟೈನ್‌ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಳ್ಳಲಾಗಿದೆ.

Comments are closed.