ಕರ್ನಾಟಕ

ರಾಜ್ಯದಲ್ಲಿ ಶೇ.70ರಷ್ಟು ಕೊರೋನಾ ಪ್ರಕರಣಗಳಿಗೆ ಟ್ರಾವೆಲ್ ಹಿಸ್ಚರಿಯೇ ಇಲ್ಲ!

Pinterest LinkedIn Tumblr


ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ಸೋಂಕು ಸಮುದಾಯದ ಹಂತಕ್ಕೆ ತಲುಪಿದೆಯೇ.. ಇಂತಹುದೊಂದು ಅನುಮಾನಕ್ಕೆ ಆರೋಗ್ಯ ಇಲಾಖೆ ಅಂಕಿಅಂಶಗಳು ಕಾರಣವಾಗಿದೆ…

ರಾಜ್ಯದಲ್ಲಿ ನಿತ್ಯ ಸಾವಿರಾರು ಮಂದಿಗೆ ಹಬ್ಬುತ್ತಿರುವ ಮಹಾಮಾರಿ ಕೊರೋನಾ ಸೋಂಕು ನಿನ್ನೆ ಕೂಡ ರಾಜ್ಯ ಮತ್ತು ರಾಜಧಾನಿ ಬೆಂಗಳೂರು ಎರಡೂ ಕಡೆ ಈ ಹಿಂದಿನ ಏಕದಿನದ ದಾಖಲೆಯನ್ನು ನಾಮಾವಶೇಷಗೊಳಿಸಿ ಹೊಸ ದಾಖಲೆ ಸೃಷ್ಟಿಸಿದೆ. ಜೊತೆಗೆ ರಾಜ್ಯದಲ್ಲಿ ಮತ್ತೆ 19 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ರಾಜ್ಯದಲಿ ಜು.1 ರಂದು ಒಂದೇ ದಿನ 1272 ಮಂದಿಗೆ ಸೋಂಕು ದೃಢಪಟ್ಟಿದ್ದೇ ಈ ವರೆಗಿನ ದಾಖಲೆಯಾಗಿತ್ತು. ಇದರ ಮರುದಿನ ಗುರುವಾರ ಮತ್ತೆ 1502 ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟು ಸತತ ಎರಡನೇ ದಿನಕೂ ಕೂಡ ಹೊಸ ದಾಖಲೆ ದಾಖಲಿಸಿದೆ.

ಈ ಪೈಕಿ ಬೆಂಗಳೂರು ನಗರ ಒಂದರಲ್ಲಿಯೇ ಗುರುವಾರ 889 ಮಂದಿಗೆ ಸೋಂಕು ಹರಡಿ ಹೊಸ ದಾಖಲೆಯಾಗಿದ್ದು, ನಗರದಲ್ಲಿ ಜೂ,28ರಂದು 783 ಜನರಿಗೆ ಸೋಂಕು ದೃಢಪಟ್ಟಿದ್ದೇ ಈ ವರೆಗಿನ ದಾಖಲೆಯಾಗಿತ್ತು. ಇದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 18 ಸಾವಿರ ದಾಟಿ 18,016ಕ್ಕೆ ಏರಿಕೆಯಾಗಿದೆ. ಈ ಪೈಕಿ ರಾಜ್ಯದಲ್ಲಿ ಪತ್ತೆಯಾಗಿರುವ ಶೇ.70ರಷ್ಟು ಕೊರೋನಾ ಪ್ರಕರಣಗಳಿಗೆ ಟ್ರಾವೆಲ್ ಹಿಸ್ಟರಿಯೇ, ಸಂಪರ್ಕಗಳೇ ಇಲ್ಲ ಎಂದು ಹೇಳಲಾಗುತ್ತಿದ್ದು, ಇದು ಕರ್ನಾಟಕದಲ್ಲಿ ಕೊರೋನಾ ಸಮುದಾಯ ಹಂತ ತಲುಪಿದೆಯೇ ಎಂಬ ಅನುಮಾನಗಳನ್ನು ಮೂಡುವಂತೆ ಮಾಡಿದೆ.

ಈ ನಡುವೆ ನಿನ್ನೆ ಸಾವನ್ನಪ್ಪಿರುವ 19 ಮಂದಿಯಲ್ಲಿ ಓರ್ವ ವ್ಯಕ್ತಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಈತ ಇಲಾಖೆಯಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಆದರೆ. ಆರೋಗ್ಯ ಆಯುಕ್ತರ ಪಂಕಜ್ ಕುಮಾರ್ ಪಾಂಡೆಯವರೊಂದಿಗೆ ಕಳೆದ 14 ದಿನಗಳಿಂದ ಯಾವುದೇ ಸಂಪರ್ಕ ಹೊಂದಿರಲಿಲ್ಲ ಎಂದು ತಿಳಿದುಬಂದಿದೆ.

ಈಗಾಗಲೇ ನಾನು ಕೊರೋನಾ ಪರೀಕ್ಷೆಗೊಳಗಾಗಿದ್ದು, ಇನ್ನೂ 5-6 ಮಂದಿ ಕೂಡ ಪರೀಕ್ಷೆ ಮಾಡಲಾಗಿದೆ. ಮೃತಪಟ್ಟ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರನ್ನೂ ಹೋಂ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಇನ್ನೊಂದು ವಾರದಲ್ಲಿ ಅವರನ್ನೂ ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಪಂಕಜ್ ಪಾಂಡೆಯವರು ಹೇಳಿದ್ದಾರೆ.

Comments are closed.