ರಾಷ್ಟ್ರೀಯ

ಆಗಸ್ಟ್​​ 15ಕ್ಕೆ ದೇಶದ ಪ್ರಥಮ ಕೊರೋನಾ ಲಸಿಕೆ ಬಿಡುಗಡೆ

Pinterest LinkedIn Tumblr


ನವದೆಹಲಿ(ಜು.03): ಮಾರಕ ಕೋವಿಡ್​​-19 ವೈರಸ್​​ ವಿರುದ್ಧ ಇಡೀ ಜಗತ್ತೇ ಹೋರಾಡುತ್ತಿದೆ. ಇದಕ್ಕಾಗಿ ಲಸಿಕೆ ಕಂಡು ಹಿಡಿಯಲು ಜಗತ್ತಿನ ಬಹುತೇಕ ದೇಶಗಳು ಪ್ರಯತ್ನಿಸುತ್ತಲೇ ಇವೆ. ಹೀಗೆ ಲಸಿಕೆಗಾಗಿ ಪ್ರಯತ್ನಿಸುತ್ತಿರುವ ದೇಶಗಳ ಪೈಕಿ ಭಾರತವೂ ಒಂದು. ಹೀಗಿರುವಾಗಲೇ ಕೊನೆಗೂ ಹೈದರಾಬಾದ್ ಮೂಲದ ಜೈವಿಕ ತಂತ್ರಜ್ಞಾನ ಕಂಪನಿ ಭಾರತ್ ಬಯೋಟೆಕ್ ಕೊರೋನಾಗೆ ಸ್ವದೇಶಿ ಲಸಿಕೆ ಕಂಡು ಹಿಡಿದಿದೆ. ದೇಶದ ಮೊದಲ ಕೋವಿಡ್​-19 ವೈರಸ್​​ ಲಸಿಕೆ ಕೋವಾಕ್ಸಿನ್ ಇದಾಗಿದೆ. ಭಾರತ ಇದೇ ಆಗಸ್ಟ್ 15ನೇ ತಾರೀಕಿನಂದು ಈ ಔಷಧಿಯನ್ನು ಬಿಡುಗಡೆ ಮಾಡಲು ತಯಾರಿ ನಡೆಸಿಕೊಂಡಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್‌ಐವಿ) ಸಹಯೋಗದೊಂದಿಗೆ ಭಾರತ್ ಬಯೋಟೆಕ್​​ ಕಂಪನಿ ಈ ಲಸಿಕೆ ತಯಾರಿಸಿದೆ. ಇದೀಗ ಐಸಿಎಂಆರ್​​ ಮತ್ತು ಭಾರತ್ ಬಯೋಟೆಕ್​ ಕಂಪನಿ​​​​ ಆಗಸ್ಟ್​ 15ರಂದು ಕೊರೋನಾಗೆ ಔಷಧ ಬಿಡುಗಡೆ ಮಾಡಲು ಮುಂದಾಗಿವೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ್​​, ಹ್ಯೂಮನ್​​ ಕ್ಲಿನಿಕ್ ಪ್ರಯೋಗಗಳನ್ನು ನಡೆಸಿದ ಬಳಿಕವೇ ಮಾರಕ ಕೊರೋನಾಗೆ ಭಾರತದ ಲಸಿಕೆ ಸಿದ್ಧಪಡಿಸಲಾಗಿದೆ. ಈ ಲಸಿಕೆ ಇದೇ ಆಗಸ್ಟ್ 15ನೇ ತಾರೀಕಿನಂದು ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.

ಭಾರತ ತಯಾರಿಸಿದ ಮೊದಲ ಕೊರೋನಾ ಲಸಿಕೆ ಇದಾಗಿದೆ. ಪುಣೆ ವೈರಾಲಜಿ ವಿಭಾಗ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್ ಲಿಮಿಟೆಡ್ ಈ ಲಸಿಕೆ ಅಭಿವೃದ್ಧಿಗೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ.

Comments are closed.