ಕರ್ನಾಟಕ

50 ವರ್ಷಕ್ಕಿಂತ ಕಡಿಮೆ ವಯಸ್ಸಿನ, ಯಾವುದೇ ಮಾರಕ ರೋಗ ಇಲ್ಲದವರಿಗೆ ಮನೆಯಲ್ಲೇ ಆರೈಕೆ: ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ ಸರ್ಕಾರ

Pinterest LinkedIn Tumblr

ಬೆಂಗಳೂರು: ಲಕ್ಷಣ ರಹಿತ ಹಾಗೂ ಅತೀ ಕಡಿಮೆ ಲಕ್ಷಣ ಇರುವ ಕೊರೋನಾ ಸೋಂಕಿತರಿಗೆ ಮನೆಯಲ್ಲಿಯೇ ಆರೈಕೆ (ಹೋಮ್ ಐಸೋಲೇಷನ್)ಗೆ ಒಳಪಡಿಸುವುದಾಗಿ ಸರ್ಕಾರ ತಿಳಿಸಿದೆ.

ಈ ಕುರಿತು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿರುವ ಸರ್ಕಾರ, 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹಾಗೂ ಯಾವುದೇ ಮಾರಕ ರೋಗ ಇಲ್ಲದವರಿಗೆ ಹೋಂ ಐಸೋಲೇಷನ್ ಮಾಡಲಾಗುತ್ತದೆ. ಐಸೊಲೇಷನ್ ನಲ್ಲಿ ಇರಿಸುವ ವೇಳೆ ಮನೆ ಯೋಗ್ಯವೇ ಇಲ್ಲವೇ ಎಂಬುದನ್ನು ಆರೋಗ್ಯ ಇಲಾಖೆ ನಿರ್ಧರಿಸುತ್ತದೆ.

ಪ್ರತ್ಯೇಕ ಕೊಠಡಿ, ಶುದ್ಧ ಗಾಳಿ, ಪ್ರತ್ಯೇಕ ಶೌಚಾಲಯ ಹೊಂದಿದ್ದ ಮನೆಯಲ್ಲಿ ಮಾತ್ರ ಸೋಂಕಿತರನ್ನು ಐಸೊಲೇಷನ್ ಮಾಡಲಾಗುತ್ತದೆ.

ಸೋಂಕಿತರನ್ನು 17 ದಿನ ಹೋಂ ಐಸೋಲೇಷನ್ ನಲ್ಲಿರಬೇಕು. ಕೈಗೆ ಸೀಲ್, ಎಡಗೈಗೆ ಇ ಟ್ಯಾಗ್ ಹಾಕಲಾಗಿರುತ್ತದೆ. ಹೋಂ ಐಸೊಲೇಷನ್ ನ ಲ್ಲಿ ಇರುವಾಗ ಟೆಲಿ ಮೆಡಿಸಿನ್ ಸೌಲಭ್ಯಗಳು ಸಿಗಲಿದೆ.

ಅಗತ್ಯ ಬಂದಿದ್ದೇ ಆದರೆ, ವೈದ್ಯರು ಸ್ಥಳಕ್ಕೇ ಬರಲಿದ್ದಾರೆ. ಇನ್ನೂ ಹೋಂ ಐಸೊಲೇಷನ್ ನಲ್ಲಿದ್ದವರು ಪ್ರತಿ ನಿತ್ಯ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಪಲ್ಸ್ ಆಕ್ಸಿಮೀಟರ್, ಥರ್ಮೋಮೀಟರ್, ಪಿಪಿಇ ಕಿಟ್ ಹೊಂದಿರಬೇಕು. ಹೋಂ ಐಸೋಲೇಷನ್ ಆಗಿರುವುದು ಅಕ್ಕಪಕ್ಕದ ಮನೆಯವರಿಗೆ ತಿಳಿದಿರಬೇಕು. ಮನೆ ಮುಂದೆ ಹೋಂ ಐಸೊಲೇಷನ್ ನೋಟಿಸ್ ಅಂಟಿಸಲಾಗುತ್ತದೆ.

ಹೋಂ ಐಸೋಲೇಷನ್ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆಗೊಳಿಸಿದ್ದು, ಸೋಂಕಿನ ಗುಣಲಕ್ಷಣ ಇಲ್ಲದವರು ಹಾಗೂ 50 ವರ್ಷದೊಳಗಿನವರಿಗೆ ಹೋಮ್ ಐಸೋಲೇಷನ್ ನಲ್ಲಿರಿಸುವುದಾಗಿ ತಿಳಿಸಿದೆ.

Comments are closed.