ಕರ್ನಾಟಕ

ಕೊರೋನಾ ಸಂಕಟದಲ್ಲಿಯೂ ರಾಜ್ಯ ಸರ್ಕಾರದಿಂದ ಹಣ ಲೂಟಿ: ಸಿದ್ದರಾಮಯ್ಯ

Pinterest LinkedIn Tumblr

ಬೆಂಗಳೂರು: ಕೊರೋನಾ ಸಂಕಟದಲ್ಲಿಯೂ ರಾಜ್ಯ ಸರ್ಕಾರ ಹಣ ಲೂಟಿ ಹೊಡೆದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ನೆಪದಲ್ಲಿ ಸರ್ಕಾರ ಲೂಟಿ ಮಾಡಿದ್ದು, 3,328 ಕೋಟಿ ಹಣ ಕೊರೋನಾಗೆ ಖರ್ಚು ಮಾಡಿದ್ದಾರೆ. ಆದರೆ 815 ಕೋಟಿಗೆ ಲೆಕ್ಕ ಸಲ್ಲಿಸಿಲ್ಲ.ಹೆಚ್ಚಿನ ಹಣ ನೀಡಿ ಕಿಟ್ ಉಪಕರಣ ಖರೀದಿ ಮಾಡಿದ್ದಕ್ಕೆ ಸರ್ಕಾರಕ್ಕೆ ಹಣಕಾಸು ಇಲಾಖೆ ಲೆಕ್ಕ ಕೇಳಿದೆ. ಸಾನಿಟೈಜರ್, ಪಿಪಿ ಇ ಕಿಟ್, ಥರ್ಮಲ್ ಸ್ಯ್ಕಾನರ್ ನಲ್ಲಿ ಎರಡು ಪಟ್ಟು ಹಣ ನೀಡಿ ಖರೀದಿ ಮಾಡಿದ್ದಾರೆ ಎಂದರು.

ಸರ್ಕಾರಕ್ಕೆ ಲೆಕ್ಕ ಕೇಳಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಅಧ್ಯಕ್ಷ ಮಾವಳ್ಳಿ ಶಂಕರ್ ಮುಖ್ಯ ಕಾರ್ಯದರ್ಶಿ ಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ಕೋವಿಡ್-19 ದೇಶ ಹಾಗೂ ರಾಜ್ಯದಲ್ಲಿ ಅತಂಕ ಉಂಟು ಮಾಡಿದೆ. ಚೈನಾದಿಂದ ಆರಂಭವಾಗಿ ಎಲ್ಲಾ ದೇಶಗಳನ್ನೂ ಆವರಿಸಿದೆ. 3 ತಿಂಗಳ ಹಿಂದಿನ ಲಾಕ್ ಡೌನ್ ಗೂ ಮುನ್ನ ದೇಶದಲ್ಲಿ ಸೋಂಕಿತರ ಸಂಖ್ಯೆ 536 ಇತ್ತು. 10 ಜನ ಸತ್ತಿದ್ದರು. ಭಾರತ ಐರೋಪ್ಯ ಒಕ್ಕೂಟ ರಾಷ್ಟ್ರಗಳಿಗಿಂತ ಹಿಂದೆ ಇತ್ತು. 4ಲಕ್ಷ 25 ಸಾವಿರ ಸೋಂಕಿತರು ಯೂರೋಪ್ ನಲ್ಲಿದ್ದರು. ರಾಷ್ಟ್ರದಲ್ಲಿ ಸಿದ್ದತೆಗೆ ಸಾಕಷ್ಟು ಸಮಯ ಇತ್ತು. ಬೆಡ್, ಆಂಬುಲೆನ್ಸ್, ವೆಂಟಿಲೇಟರ್ ವ್ಯವಸ್ಥೆ ರೂಪಿಸಲು ತುಂಬಾ ಸಮಯ ಇತ್ತು. ಇವರ ಬೇಜಾವಾಬ್ದಾರಿ, ನಿರ್ಲಕ್ಷ್ಯ ದಿಂದ ಇಡೀ ಜಗತ್ತಿನಲ್ಲಿ 4ನೇ ಸ್ಥಾನ ದಲ್ಲಿದ್ದೇವೆ. ಈಗ 6ಲಕ್ಷದ 25 ಸಾವಿರ ಸೋಂಕಿತರು ದೇಶದಲ್ಲಿದ್ದಾರೆ ಎಂದರು.

ಕೇಂದ್ರ ಹಾಗೂ ರಾಜ್ಯ ಗಳು ಸರಿಯಾದ ಸಿದ್ದತೆ ,ಕೊರೋನ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು.ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಹಾಸಿಗೆ ಲಭ್ಯವಿರುವುದಾಗಿ ಸರ್ಕಾರ ಹೇಳುತ್ತದೆ.ಆದರೆ ಖಾಸಗಿಯವರು ಸರ್ಕಾರದ ಮಾತನ್ನು ಕೇಳುತ್ತಿಲ್ಲ. ಸರ್ಕಾರ ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಲು ಹೊರಟಿದೆ ಎಂದು ಟೀಕಿಸಿದರು.

ಮೊದಲೇ ಸರ್ಕಾರ ಲಾಕ್ ಡೌನ್ ಮಾಡಬೇಕಿತ್ತು. ಈಗ ಲಾಕ್ ಡೌನ್ ಮಾಡಿದರೆ ಯಾವುದೇ ಪ್ರಯೋಜನ ಇಲ್ಲ. ಈಗಾಗಲೇ ಕರೋನಾ ಸಾಮುದಾಯಕ್ಕೆ ಹರಡಿದೆ. ಪರಿಸ್ಥಿತಿ ಕೈ ಮೀರಿ ಹೋಗಿದೆ. ಸೋಂಕಿತರ ಚಿಕಿತ್ಸೆ ವಿಚಾರದಲ್ಲಿ ಕಾಶ್ಮೀರಕ್ಕಿಂತಲೂ ಕರ್ನಾಟಕ ಹಿಂದೆ ಇದೆ. ಇದನ್ನು ನಿಭಾಯಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಫಲವಾಗಿದ್ದು, ಸರ್ಕಾರ ಜೀವಂತವಾಗಿದೆಯೇ? ಎನ್ನುವ ಪ್ರಶ್ನೆ ಹುಟ್ಟಿದೆ ಎಂದರು.

ಕೊರೋನಾ ಸೋಂಕು ನಿವಾರಣೆಗೆ ಸಿಎಂ, ಪಿಎಂ ಕೇರ್ ಗೆ ಎಷ್ಟು ಹಣ ಬಂದಿದೆ ಎಂಬ ಮಾಹಿತಿ ನೀಡಬೇಕು. ಪಿಎಂ ಕೇರ್ ಗೆ ಸುಮಾರು 60ಸಾವಿರ ಕೋಟಿ ರೂಪಾಯಿ ಬಂದಿದೆ.ಪಿಎಂ ನಿಧಿಯಿಂದ ಕರ್ನಾಟಕಕ್ಕೆ ಎಷ್ಟು ಕೊಟ್ಟಿದ್ದಾರೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಕೊರೋನ ಶೋಂಕಿತರ ಶವ ಸಂಸ್ಕಾರ ಮಾಡಲು ಆರೋಗ್ಯ ಸಿಬ್ಬಂದಿ ಹೆದರುತ್ತಿದ್ದಾರೆ. ಸತ್ತ ನಂತರ ಬೂದಿ ಪಡೆಯಲೂ ಜನ ಭಯ ಪಡುತ್ತಿದ್ದಾರೆ.ಸರ್ಕಾರ ಶವ ಸಂಸ್ಕಾರದ ವಿಚಾರದಲ್ಲಿ ಮನು ಕುಲಕ್ಕೆ ಅಗೌರವ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಆರೋಗ್ಯ ಸಚಿವ ಶ್ರೀರಾಮುಲು ಅವರ ಜಿಲ್ಲೆಯಲ್ಲಿಯೇ ಅಮಾನವೀಯ ಘಟನೆ ನಡೆದಿದೆ. ಸರ್ಕಾರದ ಬೇಜಾವಾಬ್ದಾರಿ ತನದಿಂದ ಬಳ್ಳಾರಿಯಲ್ಲಿ ಪಾರ್ಥೀವ ಶರೀರರವನ್ನು ತಿಪ್ಪೆಗೆ ಎಸೆಯುವಂತೆ ಎಸೆದಿದ್ದಾರೆ.ಈ ಸಂಬಂಧ ನಾಲ್ವರನ್ನು ಅಮಾನತ್ತು ಮಾಡಿದ್ದಾರಷ್ಟೆ.ಈ ವಿಚಾರದಲ್ಲಿ ರಾಮುಲುದು ಏನೂ ಜವಾಬ್ದಾರಿ ಇಲ್ಲವೇ? ಸರ್ಕಾರಕ್ಕೆ ಯಾವುದೇ ಜವಾಬ್ದಾರಿ ಇಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

Comments are closed.