ಕರ್ನಾಟಕ

50 ಸಾವಿರದ ಗಡಿ ದಾಟಿದ ಚಿನ್ನದ ಬೆಲೆ

Pinterest LinkedIn Tumblr


ಬೆಂಗಳೂರು (ಜು.2): ಲಾಕ್​ಡೌನ್​ ಪೂರ್ಣಗೊಂಡು ಒಂದು ತಿಂಗಳು ಕಳೆದಿದೆ. ಈ ಮಧ್ಯೆ ಚಿನ್ನಕ್ಕೆ ಭಾರೀ ಬೇಡಿಕೆ ಬರುತ್ತಿದೆ. ಪರಿಣಾಮ ಶುದ್ಧ ಚಿನ್ನ ಹಾಗೂ ಬೆಳ್ಳಿ ಬೆಲೆ 50 ಸಾವಿರದ ಗಡಿ ದಾಟಿದೆ. ಬೆಂಗಳೂರಿನಲ್ಲಿ ಬುಧವಾರ 22 ಕ್ಯಾರೆಟ್​ನ 10 ಗ್ರಾಂ ಚಿನ್ನ 370 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಬೆಲೆ 46,050 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 370 ರೂಪಾಯಿ ಏರಿಕೆ ಕಂಡಿದ್ದು, 50,200 ರೂಪಾಯಿ ಆಗಿದೆ.

ಅನ್​ಲಾಕ್​ ಘೋಷಣೆ ಆದ ನಂತರ ಚಿನ್ನ ಖರೀದಿಗೆ ಜನರು ಮುಗಿಬಿದ್ದಿದ್ದರು. ಹೀಗಾಗಿ, ಚಿನ್ನದ ದರದಲ್ಲಿ ಭಾರೀ ಏರಿಕೆ ಕಾಣುತ್ದೆತಿದೆ. ಇನ್ನು, ಬೆಳ್ಳಿ ಬೆಲೆಯಲ್ಲೂ ಭಾರೀ ಏರಿಕೆ ಕಂಡಿದೆ. ಕೆಜಿ ಬೆಳ್ಳಿಗೆ 1,500 ರೂಪಾಯಿ ಆಗಿದೆ. ಈ ಮೂಲಕ ಬೆಳ್ಳಿ ದರ 50,060 ರೂಪಾಯಿ ಆಗಿದೆ.

ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ.

ಈ ವರ್ಷಾಂತ್ಯಕ್ಕೆ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದಾಗಿ moneycontrol ವೆಬ್ಸೈಟ್ ವರದಿಮಾಡಿದೆ. ಸದ್ಯ, ಲಾಕ್ಡೌನ್ ಪೂರ್ಣಗೊಂಡಿದೆ. ಆದರೆ, ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಲಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ.

Comments are closed.