ಕರ್ನಾಟಕ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ಸಾಮೂದಾಯಿಕವಾಗಿ ಹರಡಿದೆ; ನಾರಾಯಣ ನೇತ್ರಾಲಯ ಆಸ್ಪತ್ರೆಯ ಮುಖ್ಯಸ್ಥ ಡಾ.ಭುಜಂಗ ಶೆಟ್ಟಿ

Pinterest LinkedIn Tumblr


ಬೆಂಗಳೂರು (ಜುಲೈ.01); ರಾಜ್ಯ ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಕೊರೋನಾ ವೈರಸ್‌ ಈಗಾಗಲೇ ಸಾಮೂದಾಯಿಕವಾಗಿ ಹರಡಿಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂಬ ಆಘಾತಕಾರಿ ಮಾಹಿತಿಯನ್ನು ಡಾ.ಭುಜಂಗ ಶೆಟ್ಟಿ ನ್ಯೂಸ್‌18ಗೆ ತಿಳಿಸಿದ್ದಾರೆ.

ಕೊರೋನಾ ಸೋಂಕು ಸಾಮೂದಾಯಿಕವಾಗಿ ಎಲ್ಲರಿಗೂ ಹರಡಬಾರದು ಎಂಬ ಏಕೈಕ ಕಾರಣಕ್ಕಾಗಿಯೇ ದೇಶದೆಲ್ಲೆಡೆ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು. ಆದರೆ, ಲಾಕ್‌ಡೌನ್‌ ನಡುವೆಯೂ ಕಳೆದ ಮೂರು ತಿಂಗಳಿನಿಂದ ಕೊರೋನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.

ಈ ಕುರಿತು ಮಾಹಿತಿ ನೀಡಿರುವ ನಾರಾಯಣ ನೇತ್ರಾಲಯ ಆಸ್ಪತ್ರೆಯ ಮುಖ್ಯಸ್ಥ ಡಾ.ಕೆ. ಭುಜಂಗ ಶೆಟ್ಟಿ, “ಕೊರೋನಾ ಸೋಂಕು ಈಗಾಗಲೇ ಬೆಂಗಳೂರಿನಲ್ಲಿ ಸಾಮೂದಾಯಿಕವಾಗಿ ಹರಡಿದೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರೋದಕ್ಕೆ ಇದೇ ಕಾರಣ. ಸರ್ಕಾರಕ್ಕೂ ಈ ಬಗ್ಗೆ ನಾವು ಈಗಾಗಲೇ ತಿಳಿಸಿದ್ದೇವೆ. ಸೋಂಕು ಮತ್ತೆ ಹೆಚ್ಚಾಗದಂತೆ ತಡೆಯಲು ಲಾಕ್‌ಡೌನ್ ಅಗತ್ಯ.

Comments are closed.