ಬೆಂಗಳೂರು (ಜೂನ್ 30); ರಾಜ್ಯ ಇಂದು ಒಂದೇ ದಿನ 947 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15242 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಮಾತ್ರ 503 ಜನಕ್ಕೆ ಈ ಮಾರಣಾಂತಿಕ ಸೋಂಕು ತಗುಲಿದೆ. ಅಲ್ಲದೆ, 20 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆಯೂ 246ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಇಂದಿನ Heath Bulletienನಲ್ಲಿ ತಿಳಿಸಿದೆ.
ನಾಳೆಯಿಂದ ದೇಶದಾದ್ಯಂತ ಅನ್‌ಲಾಕ್-2 ಆರಂಭವಾಗಲಿದೆ. ಆದರೆ, ಒಂದೆಡೆ ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆ ರಾಜ್ಯಾದ್ಯಂತ ಸೋಂಕಿತರ ಸಂಖ್ಯೆಯೂ ಅಧಿಕವಾಗುತ್ತಿದೆ. ಕಳೆದ ವಾರದವರೆಗೆ 200ರ ಸರಾಸರಿಯಲ್ಲಿದ್ದ ಸೋಂಕಿತರ ಸಂಖ್ಯೆ ಇದೀಗ ಸಾವಿರದ ಗಡಿ ದಾಟಿದೆ.
Comments are closed.