ಅಂತರಾಷ್ಟ್ರೀಯ

ಮೇಕಪ್ ಇಲ್ಲದ ಪತ್ನಿಯ ಮುಖ ನೋಡಿ ವಿಚ್ಛೇದನ ನೀಡಿದ ಪತಿರಾಯ

Pinterest LinkedIn Tumblr


ಕೆಲವರು ಸುಂದರವಾಗಿ ಕಾಣಬೇಕು ಎನ್ನುವ ಕಾರಣಕ್ಕೆ ಮೇಕಪ್​ ಮಾಡಿಕೊಳ್ಳುತ್ತಾರೆ. ಇದಕ್ಕೋಸ್ಕರ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಅದರಲ್ಲೂ ಮದುವೆ ದಿನವಂತೂ ಹೆಣ್ಣುಮಕ್ಕಳು ಭಾರೀ ಪ್ರಮಾಣದಲ್ಲಿ ಮೇಕಪ್​ ಮಾಡಿಕೊಳ್ಳುತ್ತಾರೆ. ವಿಚಿತ್ರ ಎಂದರೆ ಇಲ್ಲೋರ್ವ ವ್ಯಕ್ತಿ ಮೇಕಪ್​ ಇಲ್ಲದ ಹೆಂಡತಿಯ ಮುಖ ನೋಡಿ ವಿಚ್ಛೇದನವನ್ನೇ ನೀಡಿದ್ದಾನೆ!

ಇಂಗ್ಲೆಂಡ್​ನ ಮಹಿಳೆಯೋರ್ವಳಿಗೆ ಇತ್ತೀಚೆಗಷ್ಟೇ ಮಗು ಜನಿಸಿತ್ತು. ಕುಟುಂಬಕ್ಕೆ ಹೊಸ ಸದಸ್ಯ ಬರುವುದಕ್ಕೂ ಮೊದಲೂ ಈಕೆ ಹಾಗೂ ಈಕೆಯ ಗಂಡ ತುಂಬಾನೇ ಅನ್ಯೋನ್ಯವಾಗಿದ್ದರು. ಈಕೆ ಸದಾ ಮೇಕಪ್​ ಮಾಡುತ್ತಿದ್ದರಿಂದ ತುಂಬಾನೇ ಅಂದವಾಗಿ ಕಾಣುತ್ತಿದ್ದಳು.

ಆದರೆ ಮಗು ಜನಿಸಿದ ನಂತರ ಆ ಮಹಿಳೆಗೆ ನಿದ್ದೆ ಸರಿಯಾಗಿ ಆಗುತ್ತಿರಲಿಲ್ಲ. ಹೀಗಾಗಿ ಕಣ್ಣಿನ ಕೆಳಗೆ ಕಪ್ಪು ಗಟ್ಟಿತ್ತು. ಅಲ್ಲದೆ, ಮುಖದಲ್ಲಿ ಕೂಡ ಮೊದಲಿನ ಚಾರ್ಮ್​ ಇರಲಿಲ್ಲ. ಹೀಗಾಗಿ, ನಿತ್ಯ ಮನೆಯಲ್ಲಿದ್ದಾಗ ಮೇಕಪ್​ ಮಾಡಿಕೊಳ್ಳುವಂತೆ ಗಂಡ ಆಕೆಗೆ ಸೂಚಿಸಿದ್ದ.

ಒಂದೆರಡು ದಿನ ಇದನ್ನು ಆಕೆ ಅನುಸರಿದಳಾದರೂ ನಿತ್ಯ ಮೇಕಪ್​ ಮಾಡಿಕೊಳ್ಳುವುದು ಆಕೆಗೆ ಕಷ್ಟವಾಗುತ್ತಿತ್ತು. ಹೀಗಾಗಿ ಆಕೆ ಮೇಕಪ್​ ಮಾಡಿಕೊಳ್ಳುವುದನ್ನು ನಿಲ್ಲಿಸಿದ್ದಳು. ಇದರಿಂದ ಸಿಟ್ಟಾದ ಆಕೆಯ ಗಂಡ ವಿಚ್ಛೇದನ ನೀಡಿದ್ದಾನೆ.

ನಾನು ಮನೆಯಲ್ಲೇ ಇದ್ದು ಮಕ್ಕಳನ್ನು ನೋಡಿಕೊಳ್ಳುವುದು ತುಂಬಾನೇ ಕಷ್ಟವಾಗಿತ್ತು. ಅಲ್ಲದೆ, ಕೈ ಹಾಗೂ ಕಾಲಿನ ಮೇಲೆ ಬೆಳೆಯುತ್ತಿದ್ದ ರೋಮವನ್ನು ಕೂಡ ನಾನು ತೆಗೆಯುತ್ತಿರಲಿಲ್ಲ. ನಾನು ಮೊದಲಿನಷ್ಟು ಸುಂದರವಾಗಿ ಕಾಣುತ್ತಿಲ್ಲ ಎಂದು ನನ್ನ ಗಂಡ ಪದೇ ಪದೆ ಹೇಳುತ್ತಿದ್ದ. ಕೊನೆಗೂ ಆತ ನನಗೆ ವಿಚ್ಛೇದನ ನೀಡಿದ್ದಾನೆ, ಎಂದು ಆಕೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾಳೆ.

Comments are closed.