ಕರ್ನಾಟಕ

ಮೈಸೂರಿನಲ್ಲಿ ಕೇವಲ ಒಂದೇ ಮಾಸ್ಕ್, ಸ್ಯಾನಿಟೈಸರ್ ಬಳಸಿಕೊಂಡು ಕಂಟೈನ್ ಮೆಂಟ್ ಜೋನ್ ನಲ್ಲಿ ಆರೋಗ್ಯ ಸಮೀಕ್ಷೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು !

Pinterest LinkedIn Tumblr

ಮೈಸೂರು: ಮಹಾಮಾರಿ ಕೊರೋನಾ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್ ಗೆ ಜಿಲ್ಲಾಡಳಿತ ಸರಿಯಾದ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂದು ಆಶಾ ಕಾರ್ಯಕರ್ತೆಯರು ಆರೋಪಿಸಿದ್ದಾರೆ.

ಕಳೆದ ಮೂರು ತಿಂಗಳಿಂದ ಕಂಟೈನ್ ಮೆಂಟ್ ಜೋನ್ ನಲ್ಲಿ ಆರೋಗ್ಯ ಸಮೀಕ್ಷೆ ನಡೆಸುತ್ತಿದ್ದು, ಕೇವಲ ಒಂದೇ ಒಂದು ಮಾಸ್ಕ್ ಮತ್ತು 50 ಮಿ.ಲೀಟರ್ ನ ಒಂದು ಸ್ಯಾನಿಟೈಸರ್ ನೀಡಿದ್ದಾರೆ, ಮುಖ ಸೀಲ್ ಮಾಡುವ ಮಾಸ್ಕ್ ನೀಡುವ ಭರವಸೆ ನೀಡಿದ್ದು ಎಲ್ಲರಿಗೂ ಅದು ತಲುಪಿಲ್ಲ ಎಂದು ದೂರಿದ್ದಾರೆ.

ಕಂಟೈನ್ ಮೆಂಟ್ ಜೋನ್ ನಲ್ಲಿ ದೈಹಿಕವಾಗಿ ದುರ್ಬಲರಾಗಿರುವವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ನಾವು ಕೇವಲ ಒಂದೇ ಒಂದು ಮಾಸ್ಕ್ ಹಾಕಿಕೊಂಡು ಸುತ್ತುತ್ತಿರುವುದರಿಂದ ಇಲ್ಲಿನ ನಿವಾಸಿಗಳು ಅವರ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತ ಪಡಿಸಿದ್ದಾರೆ.

ನಮ್ಮ ಬಳಿ ಫೇಸ್ ಶೀಲ್ಡ್ ಮತ್ತು ಕೈ ಗವಸುಗಳಿಲ್ಲ, ನಮ್ಮ ಸಮಸ್ಯೆಗಳನ್ನು ಕೇಳಲು ಜಿಲ್ಲಾಡಳಿತಕ್ಕೆ ಆಸಕ್ತಿಯಿಲ್ಲ ಎಂದು ಆಶಾ ಕಾರ್ಯಕರ್ತೆಯೊಬ್ಬರು ಆರೋಪಿಸಿದ್ದಾರೆ.

ಮಾಸ್ಕ್ ಮತ್ತು ಸ್ಯಾನೀಟೈಸರ್ ಪೂರೈಸಲು ಅಧಿಕಾರಿಗಳು ನಿರಾಸಕ್ತಿ ತೋರುತ್ತಿದ್ದಾರೆ, ಅವರು ಕೂಡ ಎನ್ ಜಿ ಓ ಗಳ ಮೇಲೆ ಅವಲಂಬಿತರಾಗಿದ್ದಾರೆ. ನಾವು ಕೇವಲ ಒಂದು ಜೊತೆ ಕೈಗವಸು ನೀಡಿದ್ದಾರೆ. ನಾವು ಹೆಚ್ಚಿನವುಗಳನ್ನು ಕೇಳಿದರೇ ಅದನ್ನೇ ತೊಳೆದು ಉಪಯೋಗಿಸಿ ಎಂದು ಹೇಳುತ್ತಾರೆ ಎಂದು ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಕಾರ್ಯದರ್ಶಿ ಶುಭ ಮಂಗಳ ತಿಳಿಸಿದ್ದಾರೆ.

Comments are closed.