ಕರ್ನಾಟಕ

67ರ ಮುದುಕನಿಗೆ ಕೊರೊನಾ- ಮನೆ ಖಾಲಿ ಮಾಡಿದ ಏರಿಯಾದ ಜನ

Pinterest LinkedIn Tumblr


ಕೊಪ್ಪಳ: ನಗರದಲ್ಲಿ 67 ವರ್ಷದ ವೃದ್ಧನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ ಸೋಂಕಿತನ ಏರಿಯಾ ನಿವಾಸಿಗಳು ರಾತೋ ರಾತ್ರಿ ಮನೆಗಳನ್ನು ಖಾಲಿ ಮಾಡಿರುವ ಘಟನೆ ನಡೆದಿದೆ.

ನಗರದ 16ನೇ ವಾರ್ಡ್ ನ ಕುರುಬರ ಓಣಿಯ 67 ವರ್ಷದ ವೃದ್ಧನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ವೃದ್ಧ ವಾಸ ಮಾಡುತ್ತಿದ್ದ ಏರಿಯಾದಲ್ಲಿ ಆತಂಕ ಮನೆ ಮಾಡಿದ್ದು, ನಿವಾಸಿಗಳು ರಾತ್ರೋ ರಾತ್ರಿ ಮನೆಗಳನ್ನೇ ತೊರೆದಿದ್ದಾರೆ. ಕೊರೊನಾ ಭಯದಿಂದ ತಮ್ಮ ಮನೆಗಳಿಗೆ ಬೀಗ ಹಾಕಿ ಸಂಬಂಧಿಕರ ಮನೆಗಳಿಗೆ ಹಾಗೂ ಜಮೀನಿಗೆ ಸ್ಥಳಾಂತರಗೊಂಡಿದ್ದಾರೆ. ಹೀಗಾಗಿ ಈ ಏರಿಯಾದಲ್ಲೀಗ ನೀರವ ಮೌನ ಆವರಿಸಿದೆ.

ಕೊಪ್ಪಳದಲ್ಲಿ ಇಂದು ಎರಡು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ವರೆಗೆ 84 ಜನರಿಗೆ ಸೋಂಕು ತಗುಲಿದೆ. 21 ಜನ ಗುಣಮುಖವಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. 62 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಹೆಚ್ಚು ಪ್ರಕರಣಗಳ ಟ್ರಾವೆಲ್ ಹಿಸ್ಟರಿ ಪತ್ತೆಯಾಗುತ್ತಿಲ್ಲ. ಜರಲ್ಲಿ ಆತಂಕ ಮನೆ ಮಾಡಿದೆ. ಹೀಗಾಗಿ ಸೋಂಕು ತಗುಲಬಾರದು ಎಂಬ ದೃಷ್ಟಿಯಿಂದ ತಮ್ಮ ಮನೆಗಳನ್ನು ಖಾಲಿ ಮಾಡಿದ್ದಾರೆ. ಇದೆಲ್ಲದರ ಮಧ್ಯೆ ಆರಕ್ಕೂ ಹೆಚ್ಚು ಜನ ಕೊರೊನಾ ವಾರಿಯರ್ಸ್‍ಗೆ ಸೋಂಕು ತಗುಲಿರುವುದು ಭಯ ಹೆಚ್ಚಿಸಿದೆ.

Comments are closed.