ಗದಗ: ಕೊರೋನಾ ವೈರಸ್ ಭೀತಿ ಹಾಗೂ ಪರ ವಿರೋಧ ಚರ್ಚೆಯ ನಡುವೆಯೂ ರಾಜ್ಯ ಸರ್ಕಾರ SSLC ಪರೀಕ್ಷೆ ನಡೆಸುತ್ತಿದೆ. ಸಾಕಷ್ಟು ಮುಂಜಾಗ್ರತಾ ಕ್ರಮವನ್ನೂ ಜರುಗಿಸಿದೆ. ಆದರೆ, ಎಷ್ಟೇ ಮುಂಜಾಗ್ರತೆ ವಹಿಸಿದರೂ ಸಹ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಓರ್ವ ವಿಶೇಷ ಚೇತನ ವಿದ್ಯಾರ್ಥಿಗೆ ಕೊರೋನಾ ಸೋಂಕು ತಗುಲಿದೆ. ಪರಿಣಾಮ ಕೂಡಲೇ ಈತ ಹಾಗೂ ಈತನ ಸಂಪರ್ಕದಲ್ಲಿದ್ದ 19 ವಿದ್ಯಾರ್ಥಿಗಳನ್ನು ಇದೀಗ ಕ್ವಾರಂಟೈನ್ ಮಾಡಲಾಗಿದ್ದು, ಈ ಮೂಲಕ SSLC ಪರೀಕ್ಷೆ ಬರೆಯಲಿದ್ದ ಎಲ್ಲಾ 20 ವಿದ್ಯಾರ್ಥಿಗಳ ಕನಸು ನುಚ್ಚು ನೂರಾಗಿದೆ.
ಈ ಎಲ್ಲಾ ವಿದ್ಯಾರ್ಥಿಗಳು ಲಕ್ಷ್ಮೇಶ್ವರ ಪಟ್ಟಣದ ಅಂಧ ಹಾಗೂ ಮೂಖ ವಸತಿ ಶಾಲೆಯ ಮಕ್ಕಳಾಗಿದ್ದು, ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇವರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ ಈ ಎಲ್ಲಾ ವಿದ್ಯಾರ್ಥಿಗಳಿಗೂ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು ಎಂದು ಗದಗ ಜಿಲ್ಲಾ ಡಿಡಿಪಿಐ ಎನ್.ಹೆಚ್. ನಾಗೂರ ಇಂದು ತಿಳಿಸಿದ್ದಾರೆ.
Comments are closed.