ಕರ್ನಾಟಕ

ಬೆಂಗಳೂರು: ಏರಿಕೆಯಾದ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ

Pinterest LinkedIn Tumblr

ಬೆಂಗಳೂರು: ಸಿಲಿಕಾನ್ ಸಿಟಿ 43 ವಾರ್ಡ್ ಗಳಲ್ಲಿ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 501 ಕ್ಕೆ ಏರಿಕೆಯಾಗಿದೆ, ಪಟ್ಟಿಯನ್ನು ಸಾರ್ವಜನಿಕಗೊಳಿಸದಿರಲು ಬಿಬಿಎಂಪಿ ನಿರ್ಧರಿಸಿದ ಸುಮಾರು ಒಂದು ವಾರದ ನಂತರ ಹೆಚ್ಚಾಗಿದೆ. ಹೀಗಾಗಿ ಈ ಕಂಟೈನ್ ಮೆಂಟ್ ವಲಯಗಳ ಮೇಲೆ ಹೆಚ್ಚಿನ ನಿಗಾ ಇಡಬೇಕಾದ ಅವಶ್ಯಕತೆಯಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೆಚ್ಚಿನ ಪ್ರಕರಣಗಳು ಮಂಗನಪಾಳ್ಯ ಕೆಂಗೇರಿ, ಸಿಂಗಸಂದ್ರ, ಹೊಂಗಸಂದ್ರ, ಸಿದ್ದಾಪುರ, ವಿಶ್ವೇಶಪುರಂ, ಆಜಾದ್ ನಗರ, ಚಾಮರಾಜಪೇಟೆ, ಕೆ.ಆರ್ ಮಾರುಕಟ್ಟೆ, ಛಲವಾದಿಪಾಳ್ಯ, ಪಾದರಾಯನಪುರ, ರಾಯಪುರಂ, ಧರ್ಮರಾಯಸ್ವಾಮಿ ದೇವಸ್ಥಾನ, ಬಾಪುಜಿ ನಗರ ಮತ್ತು ಸಂಪಂಗಿರಾಮನಗರ. ಭಾರತಿ ನಗರ, ವಸಂತ್ ನಗರ, ಗಾಂಧಿ ನಗರ, ಸುಭಾಷ್ ನಗರ, ಓಕಳಿಪುರಂ, ಅಗ್ರಹಾರ ದಾಸರಹಳ್ಳಿ, ಶಾಂತಲ ನಗರ, ಸುಧಾಮ ನಗರ, ಕಾಟನ್‌ಪೇಟ್, ಬಿನ್ನಿಪೇಟೆ, ಹೊಸಹಳ್ಳಿ, ಜ್ಞಾನ ಭಾರತಿ, ಹಂಪಿ ನಗರ ಹೊಂಬೇಗೌಡ ನಗರ, ಲಕ್ಕಸಂದ್ರ, ಬೆಳ್ಳಂದೂರು, ಕೋರಮಂಗಲ, ಬಸವನಗುಡಿ, ಜಯನಗರ, ಶ್ರೀನಗರ, ಗಾಳಿ ಅಂಜನೇಯ ದೇವಸ್ಥಾನ, ದೀಪಾಂಜಲಿ ನಗರ, ರಾಜರಾಜೇಶ್ವರಿ ನಗರ, ಹೊಸಕೆರೆಹಳ್ಳಿ, ಗಿರಿನಗರ, ಕತ್ರಿಗುಪ್ಪೆ, ವಿದ್ಯಾಪೀಠ, ಗಣೇಶ ಮಂದಿರ, ಪಟ್ಟಾಭಿರಾಮ್ ನಗರ, ಬೈರಸಂದ್ರ, ಮಡಿವಾಳ, ಎಚ್‌ಎಸ್‌ಆರ್ ಲೇಔಟ್ ಬೊಮ್ಮನಹಳ್ಳಿ, ಬಿಟಿಎಂ ಲೇಔಟ್ ಕುಮಾರಸ್ವಾಮಿ ಲೇಔಟ್ , ಪದ್ಮನಾಭನಗರ, ಯೆಲಚೇನಹಳ್ಳಿ, ಬಿಳೇಕಳ್ಳಿ, ಚಿಕ್ಕಲ್ಲಸಂದ್ರ, ಉತ್ತರಹಳ್ಳಿ, ಕೋಣನಕುಂಟೆ, ಅಂಜನಾಪುರ, ಮತ್ತು ಹೆಮ್ಮಿಗೆ ಪುರಗಳಲ್ಲಿ ದಾಖಲಾಗಿವೆ.

Comments are closed.