ಕರ್ನಾಟಕ

ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆ ವೈದ್ಯನಿಗೆ ಕೊರೋನಾ ಸೋಂಕು

Pinterest LinkedIn Tumblr


ಹುಬ್ಬಳ್ಳಿ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ವೈದ್ಯರೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಆತಂಕ ಮನೆ ಮಾಡಿದೆ.ಪ್ಯಾಥಾಲಜಿ ವಿಭಾಗದ 52 ವರ್ಷದ ವೈದ್ಯನಿಗೆ ಸೋಂಕು ತಗುಲಿದೆ, ಧಾರವಾಡದ ಮಕ್ಕಳ ವೈದ್ಯನ ನಂತರ ಹುಬ್ಬಳ್ಳಿಯ ವೈದ್ಯರಿಗೆ ಸೋಂಕು ತಗುಲಿದೆ. ಧಾರವಾಡದ ಕೆಂಪಗೇರಿ ಓಣಿಯ ನಿವಾಸಿಯಾದ ವೈದ್ಯ ಧಾರವಾಡದಲ್ಲಿ ಲ್ಯಾಬೋರೇಟರಿ ನಡೆಸುತ್ತಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ತಜ್ಞರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತ ಖಾಸಗಿ ಶಾಲ ಶಿಕ್ಷಕಿ ಪತಿಯಿಂದ ಸೋಂಕು ತಗುಲಿದೆ ಎಂದು ಹೇಳಲಾಗಿದೆ, ಪ್ಯಾಥಾಲಜಿ ವಿಭಾಗದ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದಾರೆ, ಹೀಗಾಗಿ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆಲ್ಲಾ ಆತಂಕ ಮೂಡಿದೆ.

ಈ ವೈದ್ಯನಿಗೆ ಐಎಲ್ಐ ಲಕ್ಷಣ ಕಾಣಿಸಿಕೊಂಡಿದ್ದು, ಕಿಮ್ಸ್ ವೈದ್ಯಕೀಯ ಕಾಲೇಜು ಸೋಂಕುರಹಿತವಾಗಿದ್ದು. ಕೆಂಪಾಗೇರಿ ಓಣಿಯನ್ನು ಸೀಲ್ ಡೌನ್ ಮಾಡಲಾಗಿದೆ. ತುರ್ತು ಕೇಸ್ ಹೊರತುಪಡಿಸಿ ಎಲ್ಲರಿಗೂ ಪ್ರವೇಶ ನಿರ್ಬಂಧಿಸಲಾಗಿದೆ. ಇನ್ನು ಅವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.

Comments are closed.