ರಾಷ್ಟ್ರೀಯ

ದೇಶದಲ್ಲಿ ಇಂದು (ಸೋಮವಾರ) 14,821 ಕೊರೋನಾ ಪ್ರಕರಣಗಳು ಪತ್ತೆ: 445 ಸಾವು

Pinterest LinkedIn Tumblr


ನವದೆಹಲಿ(ಜೂ.22): ಕೊರೋನಾ ಸೋಂಕು ಹರಡುವಿಕೆ ಬಹಳ‌ ಕಡಿಮೆ ಇದ್ದಾಗ ಲಾಕ್ಡೌನ್ ಜಾರಿ ಮಾಡಲಾಗಿತ್ತು. ಆದರೀಗ, ಸೋಂಕು ಹರಡುವಿಕೆ ಹೆಚ್ಚಾದಾಗ ನಾಮಕಾವಸ್ತೆಗೆ ಮಾತ್ರ ಲಾಕ್ಡೌನ್ ಜಾರಿಗೊಳಿಸಿದ ಪರಿಣಾಮ ಭಾರತದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಸಾಗುತ್ತಿದೆ. ಕೊರೋನಾ ಪೀಡಿತರ ಸಂಖ್ಯೆ ನಾಲ್ಕು ‌ಲಕ್ಷದ ಗಡಿ ದಾಟಿದ ಎರಡೇ ದಿನದಲ್ಲಿ ನಾಲ್ಕುಕಾಲು ಲಕ್ಷದ ಗಡಿಯನ್ನೂ ಮೀರಿ ಮುಂದೆ ಹೋಗಿದೆ‌.

ಭಾರತದಲ್ಲಿ ಮೇ 30ರಿಂದ ಪ್ರತಿನಿತ್ಯ 8 ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು, ಜೂನ್‌ 3ರಿಂದ ದಿನವೊಂದರಲ್ಲಿ 9 ಸಾವಿರಕ್ಕೂ ಅಧಿಕ ಪ್ರಕರಣಗಳು, ಜೂನ್ 11ರಿಂದ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜೂನ್ 12 ತಾರೀಕಿನಿಂದ 11 ಸಾವಿರಕ್ಕೂ ಹೆಚ್ಚು‌ ಪ್ರಕರಣಗಳು, ಜೂನ್ 17ರಿಂದ 12 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜೂನ್ 18ರಿಂದ 13 ಸಾವಿರಕ್ಕೂ‌ ಹೆಚ್ಚು‌ ಪ್ರಕರಣಗಳು ವರದಿಯಾಗುತ್ತಿದ್ದವು. ಈಗ ಪ್ರತಿದಿನ 14 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಲು ಆರಂಭಿಸಿವೆ. ಭಾನುವಾರ 14,821 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದ ಕೊರೋನಾ ಪೀಡಿತರ ಸಂಖ್ಯೆ 4,25,282ಕ್ಕೆ ಏರಿಕೆಯಾಗಿದೆ.

ಇದಲ್ಲದೆ ಭಾನುವಾರ 445 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 13699ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೋನಾದಿಂದ ಗುಣ ಆದವರು 2,37,196 ಜನ ಮಾತ್ರ. ದೇಶದಲ್ಲಿ ಇನ್ನೂ 1,74,387 ಜನರಲ್ಲಿ ಕೊರೋನಾ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಮೇ 10ರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಪ್ರತಿನಿತ್ಯ ನಾಲ್ಕು ಸಾವಿರಕ್ಕಿಂತ ಹೆಚ್ಚಾಗುತ್ತಲೇ ಇದೆ.‌ ಮೇ 10ರಂದು 4,213 ಜನರಿಗೆ, ಮೇ 11ರಂದು 3,064 ಮಂದಿಗೆ, ಮೇ 12 ರಂದು 3,525 ಜನರಿಗೆ, ಮೇ13ರಂದು 3,722 ಮಂದಿಗೆ ಹಾಗೂ ಮೇ 14ರಂದು 3,967 ಜನರಿಗೆ, ಮೇ 15ರಂದು 3,970 ಮಂದಿಗೆ, ಮೇ 16ರಂದು 4,987 ಜನರಿಗೆ, ಮೇ 17ರಂದು 5,242, ಮೇ 18ರಂದು 4,970, ಮೇ 19ರಂದು 5,611, ಮೇ 20ರಂದು 5,609, ಮೇ 21ರಂದು 6,088, ಮೇ 22ರಂದು 6,654, ಮೇ 23ರಂದು 6,767, ಮೇ 24ರಂದು 6,977, ಮೇ 25ರಂದು 6,535, ಮೇ 26ರಂದು 6,387, ಮೇ 27ರಂದು 6,566, ಮೇ 28ರಂದು 7,466, ಮೇ 29ರಂದು 7,964, ಮೇ 30ರಂದು 8,380, ಮೇ 31ರಂದು 8,392, ಜೂನ್ 1ರಂದು 8,171, ಜೂನ್ 2ರಂದು 8,909, ಜೂನ್ 3ರಂದು 9,304, ಜೂನ್ 4ರಂದು 9,851, ಜೂನ್ 5ರಂದು 9,887, ಜೂನ್ 6ರಂದು 9,971, ಜೂ 7ರಂದು 9,983, ಜೂನ್ 8ರಂದು 9987, ಜೂನ್‌ 9ರಂದು 9,985, ಜೂನ್ 10ರಂದು 9,996, ಜೂನ್ 11ರಂದು 10,956, ಜೂನ್ 12ರಂದು‌ 11,458, ಜೂನ್ 13ರಂದು 11,929, ಜೂನ್ 14ರಂದು 11,502, ಜೂನ್ 15ರಂದು 10,667, ಜೂನ್ 16ರಂದು 10,974, ಜೂನ್ 17ರಂದು 12,881, ಜೂನ್‌ 18ರಂದು 13,586, ಜೂನ್ 19ರಂದು 14,516, ಜೂನ್ 20ರಂದು 15,413 ಹಾಗೂ ಜೂನ್ 21ರಂದು 14,821 ಪ್ರಕರಣಗಳು ಕಂಡುಬಂದಿವೆ.

Comments are closed.