ಕರ್ನಾಟಕ

ರಾಜ್ಯದಲ್ಲಿ ಇಂದು (ಸೋಮವಾರ) 249 ಕೊರೋನಾ ಪ್ರಕರಣಗಳು ಪತ್ತೆ; 5 ಸಾವು

Pinterest LinkedIn Tumblr


ಬೆಂಗಳೂರು(ಜೂನ್ 22): ರಾಜ್ಯದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 5 ಹೊಸ ಸಾವು ಮತ್ತು 249 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ರುದ್ರ ನರ್ತನ ಮುಂದುವರಿದಿದೆ. ನಗರವೊಂದರಲ್ಲೇ ಇವತ್ತು 126 ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಸಿಲಿಕಾನ್ ಸಿಟಿಯಲ್ಲಿ ಸಕ್ರಿಯ ಪ್ರಕರನಗಳ ಸಂಖ್ಯೆಯೇ 900ರ ಗಡಿ ದಾಟಿದೆ. ರಾಜ್ಯಾದ್ಯಂತ ಇವತ್ತು ಸಂಭವಿಸಿದ 5 ಸಾವುಗಳಲ್ಲಿ ಮೂರು ಬೆಂಗಳೂರಲ್ಲೇ ಆಗಿವೆ.

ಇವತ್ತು ಬೆಳಕಿಗೆ ಬಂದ 249 ಸೇರಿ ರಾಜ್ಯದಲ್ಲಿ ಈವರೆಗೆ ದಾಖಲಾಗಿರುವ ಕೊರೋನಾ ಪ್ರಕರಣಗಳ ಸಂಖ್ಯೆ ಈಗ 9,399ಕ್ಕೆ ಏರಿದೆ. ಇವತ್ತಿನ ಐದು ಸಾವು ಸೇರಿ ಈವರೆಗೆ ಮೃತರ ಸಂಖ್ಯೆ 142ಕ್ಕೆ ಏರಿದೆ.

ಇದೇ ಅವಧಿಯಲ್ಲಿ ಇವತ್ತು ಗುಣಮುಖಗೊಂಡವರ ಸಂಖ್ಯೆ 111 ಇದೆ. ಈವರೆಗೆ 5,730 ಮಂದಿ ಡಿಸ್​ಚಾರ್ಜ್ ಆಗಿದ್ಧಾರೆ. ಇದರೊಂದಿಗೆ ರಾಜ್ಯದಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 3,523 ಇದೆ. ಇದರಲ್ಲಿ ಸಿಂಹಪಾಲು ಬೆಂಗಳೂರು ಹೊಂದಿದೆ. ಬೆಂಗಳೂರಿನಲ್ಲಿ 919 ಸಕ್ರಿಯ ಪ್ರಕರಣಗಳಿವೆ. ಕಲಬುರ್ಗಿ, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳು 300ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳನ್ನ ಹೊಂದಿವೆ.

ಚಿತ್ರದುರ್ಗ, ಕೊಡಗು ಮತ್ತು ಚಾಮರಾಜನಗರದಲ್ಲಿ ಮಾತ್ರ ಸಕ್ರಿಯ ಪ್ರಕರಣಗಳು ಒಂದಂಕಿಯಲ್ಲಿವೆ.

Comments are closed.