ಕರ್ನಾಟಕ

ಮಲೆಮಹದೇಶ್ವರ ಬೆಟ್ಟದ ಅರಣ್ಯದಲ್ಲಿ ಸ್ಯಾಟ್​ಲೈಟ್ ಫೋನ್ ಬಳಕೆ: ಕಳವಳಕ್ಕೊಳಗಾದ ನಕ್ಸಲ್ ನಿಗ್ರಹ ದಳ

Pinterest LinkedIn Tumblr


ಚಾಮರಾಜನಗರ (ಜೂ. 20); ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಸ್ಯಾಟ್​ಲೈಟ್ ಫೋನ್ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.

ಸ್ಯಾಟ್​ಲೈಟ್ ಫೋನನ್ನು ನಕ್ಸಲೀಯರು ಬಳಸಿದ್ದಾರಾ ಅಥವಾ ಇನ್ನಿತರ ಸಮಾಜಘಾತುಕ ಶಕ್ತಿಗಳು ಬಳಸಿವೆಯಾ ಎಂಬುದು ಇನ್ನು ಖಚಿತವಾಗಿಲ್ಲ. ಒಟ್ಟಿನಲ್ಲಿ ಈ ಬೆಳವಣಿಗೆ ಆತಂಕಕ್ಕೆ ಕಾರಣವಾಗಿದ್ದು, ಈ ಬಗ್ಗೆ ಕೇಂದ್ರ ಆಂತರಿಕ ಭದ್ರತಾ ಪಡೆ, ನಕ್ಸಲ್ ನಿಗ್ರಹ ದಳ, ಕೇಂದ್ರ ಹಾಗೂ ರಾಜ್ಯ ಗುಪ್ತಚರ ಇಲಾಖೆಗಳಿಂದ ತೀವ್ರ ನಿಗಾ ವಹಿಸಲಾಗಿದೆ.

ಮಹದೇಶ್ವರಬೆಟ್ಟ ಅರಣ್ಯ ವ್ಯಾಪ್ತಿಯಲ್ಲಿ ಸ್ಯಾಟ್​ಲೈಟ್​ ಫೋನ್ ಬಳಕೆಯಾಗಿರುವ ಬಗ್ಗೆ ಖಚಿತಪಡಿಸಿರುವ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್, ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಕೆಲವು ಕಡೆ ಸ್ಯಾಟ್​ಲೈಟ್ ಫೋನ್ ಬಳಸಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದೆ. ಈ ಕುರಿತು ಕೂಲಂಕಷ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸ್ಯಾಟ್​ಲೈಟ್ ಫೋನ್​ಗಳನ್ನು ಒಮ್ಮೊಮ್ಮೆ ವಿದೇಶಿ ಪ್ರಯಾಣಿಕರು ಬಳಸಿರುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಯಾರು ಬಳಕೆ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ನಂತರ ಮುಂದಿನ ಕ್ರಮ ವಹಿಸಿವುದಾಗಿ ಅವರು ತಿಳಿಸಿದ್ದಾರೆ.

Comments are closed.