ಕರ್ನಾಟಕ

ವಿಜಯಪುರ: ಪೇದೆ​​ಗೆ ಸೋಂಕು – 37 ಮಂದಿ ಪೊಲೀಸರು ಹೋಮ್​​ ಕ್ವಾರಂಟೈನ್​​​

Pinterest LinkedIn Tumblr


ವಿಜಯಪುರ(ಜೂ.14): ವಿಜಯಪುರದಲ್ಲಿ ಪೊಲೀಸ್ ಕಾನಸ್ಟೇಬಲ್​​ಗೆ ಕೊರೋನಾ ಸೋಂಕು ತಗುಲಿದ್ದು, ಈತನ ಸಂಪರ್ಕಕ್ಕೆ ಬಂದಿರುವ 37 ಜನ ಪೊಲೀಸರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಈ ಕಾನಸ್ಟೇಬಲ್ ವಿಜಯಪುರ ನಗರದ ಕಂಟೇನ್ಮೆಂಟ್ ಏರಿಯಾದಲ್ಲಿ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಈತನಿಗೆ ಕೊರೊನಾ ಸೋಂಕು ತಗುಲಿದೆ. ಈತ ಕೆಲಸ ಮಾಡುತ್ತಿದ್ದ ವಿಜಯಪುರ ನಗರದ ಜಲನಗರ ಪೊಲೀಸ್ ಠಾಣೆಯನ್ನು ಈಗ ಸೀಲ್ಡೌನ್ ಮಾಡಲಾಗಿದ್ದು, ಈ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ಸಿಬ್ಬಂದಿಯ ಗಂಟಲು ದ್ರವದ ಮಾದರಿಯನ್ನು ಈಗಾಗಲೇ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

ಅಲ್ಲದೇ, ಈ ಕಾನ್ಸ್​ಟೇಬಲ್ ಸಂಪರ್ಕಕ್ಕೆ ಬಂದಿದ್ದ ಇತರ ಪೊಲೀಸ್ ಠಾಣೆಯ 4 ಜನ ಸಿಬ್ಬಂದಿಯನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದೆ. ಈಗ ಜಲನಗರ ಪೊಲೀಸ್ ಠಾಣೆಯನ್ನು ಸೀಲ್​​ಡೌನ್​​ ಮಾಡಿದ್ದರಿಂದ ಈ ಠಾಣೆಯ ಪಕ್ಕದಲ್ಲಿರುವ ಹೇಮರೆಡ್ಡಿ ಮಲ್ಲಮ್ಮ ಸಮುದಾಯ ಭವನಕಕ್ಕೆ ಜಲನಗರ ಪೊಲೀಸ್ ಠಾಣೆಯನ್ನು ತಾತ್ಕಾಲಿಕವಾಗಿ ಶಿಫ್ಟ್ ಮಾಡಲಾಗಿದೆ.

ಜಲನಗರ ಪೊಲೀಸ್ ಠಾಣೆಯ ಎಲ್ಲ ಸಿಬ್ಬಂದಿ ಹೋಂ ಕ್ವಾರಂಟೈನ್​​ನಲ್ಲಿ ಇರುವುದರಿಂದ ಬೇರೆ ಠಾಣೆಯ ಸಿಬ್ಬಂದಿಯನ್ನು ತಾತ್ಕಾಲಿಕ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ 1500 ಜನ ಸಿವಿಲ್ ಮತ್ತು 300 ಜನ ಮೀಸಲು ಪಡೆಯ ಸಿಬ್ಬಂದಿಯಿದ್ದು, ಈಗಾಗಲೇ ವಿಜಯಪುರ ನಗರ ಮತ್ತು ಇಂಡಿ ಉಪವಿಭಾಗದ 500 ಜನ ಪೊಲೀಸ್ ಸಿಬ್ಬಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ.

ಇನ್ನುಳಿದಂತೆ ಕೊರೊನಾ ಸೋಂಕಿನ ಲಕ್ಷಣಗಳು ಇರುವ ಮತ್ತು ಹೈ ರಿಸ್ಕ್ ಏರಿಯಾದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಥ್ರೋಟ್ ಸ್ವ್ಯಾಬ್ ಮಾತ್ರ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಅಲ್ಲದೇ, 50 ವರ್ಷ ಮೇಲ್ಪಟ್ಟ ಸಿಬ್ಬಂದಿಯ ಥ್ರೋಟ್ ಸ್ವ್ಯಾಬ್ ಸಂಗ್ರಹಿಸಲಾಗುತ್ತಿದೆ. ಈಗಾಗಲೇ ಕಳುಹಿಸಲಾಗಿರುವ ಥ್ರೋಟ್ ಸ್ವ್ವ್ಯಾಬ್ ಗಳಲ್ಲಿ ಬಹುತೇಕ ವರದಿಗಳು ನೆಗೆಟಿವ್ ಬಂದಿವೆ. ಓಬ್ಬ ಸಿಬ್ಬಂದಿಯ ವರದಿ ಮಾತ್ರ ಪಾಸಿಟಿವ್ ಬಂದಿದೆ ಎಂದು ಅನುಪಮ್ ಅಗ್ರವಾಲ್ ನ್ಯೂಸ್ 18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

Comments are closed.