ಅಂತರಾಷ್ಟ್ರೀಯ

ವಿಶ್ವದಲ್ಲಿ 79 ಲಕ್ಷ ದಾಟಿದ ಕೊರೋನಾ ಸೋಂಕು ಪ್ರಕರಣಗಳು: 4.33 ಲಕ್ಷ ಬಲಿ!

Pinterest LinkedIn Tumblr

ನವದೆಹಲಿ: ಜಗತ್ತಿನಾದ್ಯಂತ ಕೊರೋನಾ ಮಹಾಮಾರಿ ತನ್ನ ನರ್ತನವನ್ನು ಮುಂದುವರೆಸಿದ್ದು ಸೋಂಕಿತರ ಸಂಖ್ಯೆ 79 ಲಕ್ಷ ದಾಟಿದ್ದು 4.33 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ವಿಶ್ವದಲ್ಲಿ ಸೋಂಕಿನ ಸಂಖ್ಯೆ 79,11,909ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಸೋಂಕಿಗೆ 4,33,158 ಮಂದಿ ಬಲಿಯಾಗಿದ್ದಾರೆ. ಇನ್ನು ಸಾವಿನ ಪ್ರಮಾಣ ಮುಂದುವರೆಯಲಿದೆ.

ಅಮೆರಿಕದಲ್ಲಿ 21.43 ಲಕ್ಷ ಮಂದಿ ಸೋಂಕಿಗೆ ತುತ್ತಾಗಿದ್ದಾರೆ. 1.17 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಬ್ರೆಜಿಲ್ ನಲ್ಲಿ 8.51 ಲಕ್ಷ ಸೋಂಕು, 42 ಸಾವಿರ ಬಲಿ. ರಷ್ಯಾ 5.29 ಲಕ್ಷ ಸೋಂಕು. 7 ಸಾವಿರ ಬಲಿ. ಭಾರತದಲ್ಲಿ ಸೋಂಕಿತರ ಸಂಖ್ಯೆ 3.24 ಲಕ್ಷಕ್ಕೆ ಏರಿಕೆಯಾಗಿದೆ. ಇನ್ನು 9,247 ಮಂದಿ ಸಾವನ್ನಪ್ಪಿದ್ದಾರೆ.

ಬ್ರಿಟನ್ ನಲ್ಲಿ 2.95 ಲಕ್ಷ ಸೋಂಕು. 41 ಸಾವಿರ ಮಂದಿ ಸಾವು. ಸ್ಪೇನ್ ನಲ್ಲಿ 2.90 ಲಕ್ಷ ಸೋಂಕು. 27 ಸಾವು. ಇಟಲಿಯಲ್ಲಿ ಸದ್ಯ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಸದ್ಯ 2.36 ಲಕ್ಷ ಮಂದಿ ಸೋಂಕಿತರಿದ್ದು 34 ಸಾವಿರ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

Comments are closed.