ಬೆಂಗಳೂರು(ಜೂ.14): ರಾಜಧಾನಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಪೊಲೀಸರಲ್ಲಿ ದಿನೇ ದಿನೇ ಕೊರೋನಾ ಭೀತಿ ಹೆಚ್ಚಾಗಿದೆ. ಕೋವಿಡ್-19 ಸಂಖ್ಯೆ ದಿನೇದಿನೇ ಜಾಸ್ತಿ ಆಗ್ತಾ ಇದ್ದು, ಅದರಲ್ಲೂ ಕೊರೋನಾ ವಾರಿಯರ್ ಆಗಿರುವ ಪೊಲೀಸರನ್ನೂ ಬಿಡ್ತಾ ಇಲ್ಲ. ಇದರಿಂದ ಮುಕ್ತವಾಗಿ ಕೆಲಸ ಮಾಡೋಕೆ ಆಗದೆ ಹಿಂದೇಟು ಹಾಕಿವಂತಾಗಿದೆ.
ಇದರ ಜೊತೆಗೆ ಪ್ರತಿನಿತ್ಯ ಠಾಣೆಯಲ್ಲಿ 5-10 ಜನ ಪೊಲೀಸರು ರಜೆಗಾಗಿ ಮನವಿ ಮಾಡ್ತಾ ಇದ್ದಾರೆ. ಮನೆಯಲ್ಲಿ ಚಿಕ್ಕ ಮಕ್ಕಳಿದ್ದಾರೆ ಭಯ ಆಗ್ತಿದೆ, ರಜೆ ಕೊಡಿ ಸಾರ್ ಎಂದು ಲೀವ್ ಲೆಟರ್ಗಳನ್ನು ಆಯಾ ಠಾಣೆಯ ಇನ್ಸ್ಸ್ಪೆಕ್ಟರ್ಗಳಿಗೆ ಕೊಡುತ್ತಾ ಇದ್ದಾರೆ. ಈ ವೇಳೆ ವೀಕ್ ಆಫ್ ಹಾಗೂ ಮೆಡಿಕಲ್ ಎಮರ್ಜೆನ್ಸಿ ಇದ್ರೆ ಮಾತ್ರ ರಜೆ ಅಂತ ಇನ್ಸ್ಪೆಕ್ಟರ್ ಗಳು ಸ್ಟ್ರಿಕ್ಟ್ ಆಗಿ ಹೇಳ್ತಾ ಇದ್ದಾರೆ.
ಇನ್ನು, ಒಬ್ಬೊಬ್ಬ ಕಾನ್ಸ್ಟೇಬಲ್ ಸುಮಾರು 10-15 ದಿನಗಳ ರಜೆ ಕೊಡುವಂತೆಯೂ ಮನವಿ ಮಾಡ್ತಾ ಇದ್ದಾರೆ. ಇದೆಲ್ಲಾ ಒಂದು ಕಡೆ ಆದರೆ ಮತ್ತೊಂದು ಕಡೆ ಕೇಸ್ ಸಂಬಂಧ ಆರೋಪಿಯನ್ನು ಹಿಡಿಯೋಕೂ ಹಿಂದೇಟು ಹಾಕ್ತಾ ಇದ್ದಾರೆ ಪೊಲೀಸರು. ಯಾಕಂದ್ರೆ ನಗರದಲ್ಲಿ ಠಾಣೆಗೆ ಕರೆತಂದ ಆರೋಪಿಗಳಲ್ಲಿ ಪಾಸಿಟಿವ್ ಬರುತ್ತಿದೆ, ಜಯನಗರ, ಹೆಚ್ಎಸ್ಆರ್ ಲೇಔಟ್, ಸಿಸಿಬಿಯಲ್ಲಿಯೂ ಆರೋಪಿಗೆ ಪಾಸಿಟಿವ್ ಬಂದಿದೆ. ಹೀಗಾಗಿ ಇವರು ಕಳ್ಳರನ್ನು ಹಿಡಿಯೋಕೂ ಹಿಂದೇಟು ಹಾಕ್ತಾ ಇದ್ದಾರೆ.
ಕೊರೋನಾ ಆರಂಭದಲ್ಲಿ ಶೇ.33ರಷ್ಟು ಸಿಬ್ಬಂದಿಗೆ ಮನೆಯಲ್ಲಿ ಇರುವಂತೆ ಸೂಚಿಸಿದ್ರು. ಯಾಕಂದ್ರೆ ಠಾಣೆಯಲ್ಲಿ ಇರೋ ಪೊಲೀಸರಿಗೆ ಯಾರಿಗಾದ್ರೂ ಪಾಸಿಟಿವ್ ಬಂದ್ರೆ ಬ್ಯಾಕಪ್ಗೆ ಅಂತ ಇರಿಸಿದ್ರು. ಆದರೀಗ, ಅವರನ್ನು ಸಹ ಪ್ರತಿನಿತ್ಯ ಕೆಲಸಕ್ಕೆ ಹಾಜರಾಗುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.
Comments are closed.