ಕರ್ನಾಟಕ

ರಾಜ್ಯದಲ್ಲಿ ಇಂದು (ರವಿವಾರ) 176 ಕೊರೋನಾ ಪ್ರಕರಣಗಳು​​ ಪತ್ತೆ: 5 ಬಲಿ

Pinterest LinkedIn Tumblr


ಬೆಂಗಳೂರು(ಜೂ.14): ಕರ್ನಾಟಕದಲ್ಲಿ ಮಾರಕ ಕೊರೋನಾ ವೈರಸ್​ ಆರ್ಭಟ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ ಮತ್ತೆ 176 ಮಂದಿಗೆ ಕೊರೋನಾ ವೈರಸ್​ ಸೋಂ,ಉ ಬಂದಿದೆ. ಇದರ ಪರಿಣಾಮ ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯೂ 7 ಸಾವಿರಕ್ಕೆ ಏರಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೆಲ್ತ್​​​ ಬುಲೆಟಿನ್​​ನಿಂದ ತಿಳಿದು ಬಂದಿದೆ.

ರಾಜ್ಯ ಸರ್ಕಾರದ ಪ್ರಕಾರ ಒಟ್ಟು 7 ಸಾವಿರ ಸೋಂಕಿತರ ಪೈಕಿ ಸದ್ಯ 3,955 ಮಂದಿ ಡಿಸ್ಚಾರ್ಜ್​​ ಆಗಿದ್ಧಾರೆ. ಹೀಗಾಗಿ ಸದ್ಯ 2,956 ಆ್ಯಕ್ಟೀವ್​​​ ಕೇಸುಗಳಿವೆ. ಇವರಿಗೆ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿ ಕೋವಿಡ್​​-19 ಚಿಕಿತ್ಸೆ ನೀಡಲಾಗುತ್ತಿದೆ.

ಮಾರಕ ಕೊರೋನಾ ವೈರಸ್​ಗೆ ಇಂದು ಐವರು ಬಲಿಯಾಗಿದ್ಧಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 64 ವರ್ಷದ ಮಹಿಳೆ ಸಾವು ಸೇರಿದಂತೆ ರಾಜ್ಯದ ವಿವಿಧೆಡೆ ಇನ್ನಿಬ್ಬರು ಅಸುನೀಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 86ಕ್ಕೆ ಏರಿದೆ.

ಭಾರತದಲ್ಲಿ ಶನಿವಾರ ಒಂದೇ ದಿನ 311 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಹೀಗಾಗಿ ದೇಶದಲ್ಲಿ ಕೊರೋನಾ ವೈರಸ್​ಗೆ ಬಲಿಯಾದವರ ಸಂಖ್ಯೆ 9,195ಕ್ಕೆ ಏರಿಕೆಯಾಗಿದೆ.

Comments are closed.