ಕರ್ನಾಟಕ

ಪತಿಯ ಅಪಹರಣಕ್ಕೆ ಸುಪಾರಿ ನೀಡಿದ ಪತ್ನಿ; ಪ್ರಕರಣ ಭೇದಿಸಿದ ಪೊಲೀಸರು

Pinterest LinkedIn Tumblr

ಬೆಂಗಳೂರು: ಪತಿಯ ಅಪಹರಣಕ್ಕೆ ಪತ್ನಿಯೇ ಸುಪಾರಿ ನೀಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಬಾಗಲಗುಂಟೆ ಪೊಲೀಸರು, ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.

ಹೆಸರುಘಟ್ಟ ನಿವಾಸಿ ಅಭಿಷೇಕ್ (26) ಬಾಗಲಗುಂಟೆಯ ಭರತ್ (25) ಜೆಪಿ ನಗರದ ಪ್ರಕಾಶ್ ಕೆಪಿ (22) ಹಾಗೂ ಬ್ಯಾಡರಹಳ್ಳಿಯ ಚೆಲುವ ಮೂರ್ತಿ (22) ಬಂಧಿತ ಆರೋಪಿಗಳು. ಎರಡನೇ ಪತ್ನಿ ರತ್ನಾ ಕಾತೂಮ್ ಜೊತೆಗಿದ್ದ ಪತಿ ಶಾಹಿದ್ ಷೇಕ್ ನನ್ನು ಅಪಹರಿಸಲು ಆತನ ಮೊದಲ ಹೆಂಡತಿಯಿಂದ ಆರೋಪಿಗಳು ಸುಪಾರಿ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಸ್ನೇಹಿತರೊಬ್ಬರು ವಿಶ್ವೇಶ್ವರಯ್ಯ ಲೇಔಟ್ ನಲ್ಲಿರುವ ಷೇಕ್ ನಿವಾಸಕ್ಕೆ ಆಗಮಿಸಿದ್ದು, ಮೀನು ತರಲೆಂದು ಮನೆಯಿಂದ ಹೊರಗೆ ತೆರಳಿದ್ದಾರೆ. ಆಗ ಕಾರಿನಲ್ಲಿ ಬಂದ ಸುಮಾರು ಐದು ಮಂದಿ ಷೇಕ್ ನನ್ನು ಅಪಹರಿಸಿದ್ದಾರೆ. ಅಲ್ಲಿಂದ ಮನೆಗೆ ಧಾವಿಸಿದ ಷೇಕ್ ಸ್ನೇಹಿತ ವಿಷಯ ತಿಳಿಸಿದ್ದಾನೆ. ನಂತರ ರತ್ನ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಈ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ನಾಗಮಂಗಲ ತಾಲೂಕಿನ ಬಿಜಿಎಸ್ ಟೋಲ್ ಪ್ಲಾಜಾ ಬಳಿ ಷೇಕ್ ನನ್ನು ರಕ್ಷಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಷೇಕ್ ಅಪರಿಸಲು ಆತನ ಮೊದಲ ಹೆಂಡತಿ ರೊಮಾ ಷೇಕ್ ತಮ್ಮಗೆ 2 ಲಕ್ಷ ರೂ. ಸುಪಾರಿ ನೀಡಿರುವುದಾಗಿ ವಿಚಾರಣೆ ವೇಳೆಯಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಪತಿಯನ್ನು ಅಪಹರಿಸಿ ರತ್ನಾಗೆ ಕರೆ ಮಾಡಿ ಹೆಚ್ಚು ಹಣ ಮತ್ತು ಒಡವೆಗಳನ್ನು ನೀಡುವಂತೆ ಬೇಡಿಕೆ ಇರಿಸಲು ರೋಮ್ ಆಂಡ್ ಗ್ಯಾಂಗ್ ನಿರ್ಧರಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.