ಕರ್ನಾಟಕ

ಕೊರೋನಾ ಸೋಂಕು ಶಂಕಿತ ವ್ಯಕ್ತಿಗಳು ಮೃತಪಟ್ಟ 6 ಗಂಟೆಯೊಳಗೆ ಗಂಟಲ ದ್ರವ ಪರೀಕ್ಷೆ !

Pinterest LinkedIn Tumblr

ಬೆಂಗಳೂರು: ಕೊರೋನಾ ಸೋಂಕು ಶಂಕಿತ ವ್ಯಕ್ತಿಗಳು ಮೃತಪಟ್ಟ 6 ಗಂಟೆಯೊಳಗೆ ಅವರ ಗಂಟಲ ದ್ರವ ಮಾದರಿ ಸಂಗ್ರಹಿಸಿ, ಕೋವಿಡ್ ಪರೀಕ್ಷೆ ನಡೆಸಬೇಕು ಎಂದು ಆರೋಗ್ಯ ಇಲಾಖೆ ಎಲ್ಲಾ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ.

ತೀವ್ರ ಉಸಿರಾಟದ ಸಮಸ್ಯೆ ಹಾಗೂ ಶೀತಜ್ವರ ಸಮಸ್ಯೆಯಿಂದ ಬಳಲುತ್ತಿರುವವರು ಹಾಗೂ ಇದರಿಂದ ಮೃತಪಟ್ಟ ವ್ಯಕ್ತಿಗಳಿಗೆ ಈ ಮೊದಲಿನಿಂತೆಯೇ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸಬೇಕು. ಹೊರ ದೇಶ ಹಾಗೂ ಹೊರ ರಾಜ್ಯಗಳ ಪ್ರಯಾಣಿಕರಲ್ಲಿ ಈ ರೋಗ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಪರೀಕ್ಷೆ ಮಾಡಬೇಕು. ಮೃತಪಟ್ಟಿರುವ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಅವರ ಸಂಪರ್ಕ ಹೊಂದಿರುವವರನ್ನು ಕ್ವಾರಂಟೈನ್’ಗೆ ಒಳಪಡಿಸಿ, ಅವರಿಗೂ ಕೋವಿಡ್ ಪರೀಕ್ಷೆ ನಡೆಸಬೇಕು ಎಂದು ಸೂಚಿಸಲಾಗಿದೆ.

ಕೊರೋನಾ ಶಂಕಿತರಿಗೆ ಪರೀಕ್ಷೆ ನಡೆದಿರಲು ಹಾಗೂ ಲಕ್ಷಣ ಇರುವವರನ್ನೂ ಮಾತ್ರ ಪರೀಕ್ಷೆಗೊಳಪಡಿಸಬೇಕೆಂದು ಈ ಹಿಂದೆ ಆರೋಗ್ಯ ಇಲಾಖೆ ಹೊರಡಿಸಿದ್ದ ಆದೇಶ ಭಾರೀ ಟೀಕೆಗೊಳಗಾಗಿತ್ತು. ಈ ಹಿನ್ನೆಲೆಯಲ್ಲಿ ನಿರ್ಧಾರವನ್ನು ಹಿಂಪಡೆದಿರುವ ನೂತನ ಆದೇಶವನ್ನು ಹೊರಡಿಸಿದೆ.

Comments are closed.