ಕರ್ನಾಟಕ

ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ 50 ಸಜೀವ ಗುಂಡು ನಾಪತ್ತೆ ಪ್ರಕರಣಕ್ಕೆ ತಿರುವು; ಸಿಕ್ಕಿಬಿದ್ದ ಕಳ್ಳ ಯಾರು ಗೊತ್ತೇ…?

Pinterest LinkedIn Tumblr

ಮೈಸೂರು: ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ 50 ಸಜೀವ ಗುಂಡು ನಾಪತ್ತೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ನಾಪತ್ತೆಯಾಗಿದ್ದ ಬುಲೆಟ್‌ಗಳು ಕಪಿಲಾ ನದಿಯಲ್ಲಿ ಪತ್ತೆಯಾಗಿವೆ.

ಬುಲೆಟ್ ಕದ್ದಿದ್ದ ಕಳ್ಳ ಠಾಣೆಯಲ್ಲೆ ಸಿಕ್ಕಿಬಿದ್ದಿದ್ದಾನೆ. ಹಿಂದಿನ ರೈಟರ್ ಕೃಷ್ಣೇಗೌಡ ಎಂಬವರೇ ಬುಲೆಟ್‌ಗಳನ್ನು ಕದ್ದಆರೋಪಿಯಾಗಿದ್ದು, ತಾನು ಕದ್ದ ಬುಲೆಟ್‌ಗಳನ್ನ ನಂಜನಗೂಡು ಕಪಿಲಾ ನದಿಯಲ್ಲಿ ಎಸೆದಿದ್ದಾಗಿ ವಿಚಾರಣೆ ವೇಳೆ ಆತ ಸತ್ಯ ಬಾಯ್ಬಿಟ್ಟಿದ್ದಾನೆ.

ಕಳೆದ ವಾರವಷ್ಟೆ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ 50 ಬುಲೆಟ್‌ಗಳು ಠಾಣಾ ದಾಸ್ತಾನು ಕೊಠಡಿಯಿಂದ ನಾಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಭಂಧಿಸಿದಂತೆ ಇಬ್ಬರನ್ನ ಅಮಾನತು ಸಹ ಮಾಡಲಾಗಿತ್ತು. ಅಂದು ಕೃಷ್ಣೇಗೌಡ ಮೇಲೆ ಶಂಕೆ ಇತ್ತು.ಹೀಗಾಗಿ ಇಂದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ್ಮಹತ್ಯೆ ನಾಟಕವಾಡಿದ್ದ ಕೃಷ್ಣೇಗೌಡ ನಂತರ ಒಂದೊಂದೆ ಸತ್ಯ ಬಾಯ್ಬಿಟ್ಟಿದ್ದಾನೆ.

ಬುಲೆಟ್ಸ್ ನಾಪತ್ತೆ ಪ್ರಕರಣವನ್ನು ಮರೆಮಾಚಲು ಆರೋಪಿ ಕೃಷ್ಣೇಗೌಡ ಆತ್ಮಹತ್ಯೆ ಡ್ರಾಮಾ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಸಜೀವ ಗುಂಡುಗಳು ನಾಪತ್ತೆಯಾದ ಪ್ರಕರಣ ಸಂಬಂಧ ಕೃಷ್ಣೇಗೌಡನನ್ನು ಅಮಾನತು ಮಾಡಲಾಗಿತ್ತು. ಇದರಿಂದ ವಿಚಲಿತನಾದ ಆದ ಆತ್ಮಹತ್ಯೆಯ ಹೈ ಡ್ರಾಮಾ ಮಾಡಿದ್ದ.

ನುರಿತ ಈಜುಗಾರರ ನೆರವಿನಿಂದ ಕಪಿಲಾ ನದಿಯಲ್ಲಿ ಬುಲೆಟ್‌ಗಳಿಗಾಗಿ ಶೋಧ ಮಾಡಿದಾಗ 20 ಬುಲೆಟ್‌ಗಳು ಕಪಿಲಾ ಸೇತುವೆ ಬಳಿ ಪತ್ತೆಯಾಗಿದ್ದು, ಉಳಿದ ಬುಲೆಟ್‌ಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿರುವ ಪೊಲೀಸರು ಎಎಸ್ಪಿ ಸ್ನೇಹಾ ನೇತೃತ್ವದಲ್ಲಿ ತನಿಖೆ ಮುಂದುವರೆಸುತ್ತಿದ್ದಾರೆ.

Comments are closed.