ಕರ್ನಾಟಕ

ರಾಜ್ಯದಲ್ಲಿ ಇಂದು(ಬುಧವಾರ) 120 ಕೊರೋನಾ ಪ್ರಕರಣಗಳು ಪತ್ತೆ; ಮೂವರು ಸಾವು

Pinterest LinkedIn Tumblr


ಬೆಂಗಳೂರು(ಜೂ.10): ಕರ್ನಾಟಕದಲ್ಲಿ ಕೊರೋನಾ ವೈರಸ್​ ಅಟ್ಟಹಾಸ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ 120 ಮಂದಿಗೆ ಕೋವಿಡ್​​-19 ಸೋಂಕು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6 ಸಾವಿರ ದಾಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್​​ ಬುಲೆಟಿನ್​​ನಿಂದ ತಿಳಿದು ಬಂದಿದೆ.

ರಾಜ್ಯ ಸರ್ಕಾರದ ಪ್ರಕಾರ, ಒಟ್ಟು 6,041 ಸೋಂಕಿತರ ಪೈಕಿ 2862 ಜನ ಸಂಪೂರ್ಣ ಗುಣಮುಖರಾಗಿದ್ದಾರೆ. ಹೀಗಾಗಿ ಸದ್ಯ 3,108 ಆ್ಯಕ್ಟೀವ್​​​ ಕೇಸುಗಳು ಇವೆ. ಈ ಎಲ್ಲರಿಗೂ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರಿಸಿ ಕೋವಿಡ್​-19 ಚಿಕಿತ್ಸೆ ನೀಡಲಾಗುತ್ತಿದೆ.

ಇಂದು ಪತ್ತೆಯಾದ 120 ಕೇಸುಗಳ ಪೈಕಿ ಬೆಂಗಳೂರು ನಗರ 42, ಯಾದಗಿರಿ 27, ವಿಜಯಪುರ 13, ಕಲಬುರ್ಗಿ 11, ಬೀದರ್ 5, ದಕ್ಷಿಣ ಕನ್ನಡ 4, ಧಾರವಾಡ 4, ದಾವಣಗೆರೆ 3, ಹಾಸನ 3, ಬಳ್ಳಾರಿಯಲ್ಲಿ 3 ಪ್ರಕರಣಗಳು ದಾಖಲಾಗಿವೆ. ಇನ್ನು, ಬಾಗಲಕೋಟೆ, ರಾಮನಗರ ತಲಾ ಎರಡು ಮತ್ತು ಬೆಳಗಾವಿಯಲ್ಲಿ ಒಬ್ಬರಿಗೆ ಕೊರೋನಾ ಬಂದಿದೆ ಎಂದು ವರದಿಯಾಗಿದೆ.

Comments are closed.