ಕರ್ನಾಟಕ

ಕಲಬುರಗಿ ಜಿಲ್ಲೆಯಲ್ಲಿ ಕೊರೊನಾಗೆ ಯುವತಿ ಬಲಿ: ಸಾವಿನ ಸಂಖ್ಯೆ 8ಕ್ಕೇರಿಕೆ

Pinterest LinkedIn Tumblr


ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ 17 ವರ್ಷ ವಯಸ್ಸಿನ ಯುವತಿ ಸಾವಿಗೀಡಾಗಿದ್ದಾಳೆ.

ಹೀಗಾಗಿ, ಜಿಲ್ಲೆಯಲ್ಲಿ ಕೊರೊನಾ ಸಂಬಂಧಿತ ಸಾವಿನ ಸಂಖ್ಯೆ 8ಕ್ಕೆ ತಲುಪಿದೆ.

ಜಿಲ್ಲೆಯ ಆಳಂದ ಪಟ್ಟಣದ ಈ ಯುವತಿಗೆ ನರರೋಗ ಸಂಬಂಧಿತ ಕಾಯಿಲೆ ಇತ್ತು. ಅತಿಯಾದ ಜ್ವರ ಕಾಡುತ್ತಿದ್ದ ಕಾರಣಕ್ಕಾಗಿ ಜೂ.4ರಂದು ಮಧ್ಯಾಹ್ನ 3.30ಕ್ಕೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಸೇರ್ಪಡೆ ಮಾಡಲಾಗಿತ್ತು.

ತಕ್ಷಣ ಯುವತಿಯ ಗಂಟಲು ದ್ರವ ಮಾದರಿ (ಪಿ-5900) ಪಡೆದು ಕೊರೊನಾ ತಪಾಸಣೆಗೆ ಕಳುಹಿಸಿಕೊಡಲಾಗಿತ್ತು. ಆದರೆ, ಅದೇ ದಿನ ರಾತ್ರಿ 8.45ಕ್ಕೆ ಮೃತಪಟ್ಟಿದ್ದಳು. ಇಂದು ಬಾಲಕಿಯ ಕೊರೊನಾ ತಪಾಸಣಾ ವರದಿ ಪಾಸಿಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಮಂಗಳವಾರ ಕೂಡ 10 ಹೊಸ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ 769ಕ್ಕೆ ಏರಿಕೆಯಾಗಿದೆ.

Comments are closed.