ಅಂತರಾಷ್ಟ್ರೀಯ

PORN STAR ಆದ ಆಸ್ಟ್ರೇಲಿಯಾದ ರೇಸಿಂಗ್ ಲೇಡಿ ಡ್ರೈವರ್ ರೆನಿ ಗ್ರೇಸಿ

Pinterest LinkedIn Tumblr


ಆಸ್ಟ್ರೇಲಿಯ: ಇಡೀ ವಿಶ್ವಾದ್ಯಂತ ಇಂದು ಕ್ರೀಡಾಪಟು ಆಗಿರುವ ಯುವತಿಯೋರ್ವಳ ಚರ್ಚೆ ನಡೆಯುತ್ತಿದ್ದು, ಆಕೆಯ ಹೆಸರು ರೆನಿ ಗ್ರೇಸಿ. ಸದ್ಯ ಆಕೆ ಓರ್ವ ಫುಲ್ ಟೈಮ್ ಪೋರ್ನ್ ಸ್ಟಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಆದರೆ, ಒಂದು ಕಾಲದಲ್ಲಿ ರೆನಿಯನ್ನು ವಿಶ್ವಾದ್ಯಂತ ಜನರು ಓರ್ವ ಸೂಪರ್ ಕಾರ್ ರೇಸರ್ ಆಗಿ ಗುರುತಿಸುತ್ತಿದ್ದರು.

ಸದ್ಯ ರೆನಿ ಓರ್ವ ಫುಲ್ ಟೈಮ್ ಪೋರ್ನ್ ಸ್ಟಾರ್ ಆಗಿ ಕೆಲಸ ಮಾಡುತ್ತಿದ್ದು, ಆಕೆಯ ಇನ್ಸ್ಟಾಗ್ರಾಮ್ ಖಾತೆ ಪೋರ್ನ್ ಭಾವಚಿತ್ರಗಳಿಂದ ತುಂಬಿಹೋಗಿದೆ.

ಓರ್ವ ಪ್ರತಿಭಾವಂತ ಸ್ಪೋರ್ಟ್ಸ್ ಪರ್ಸನ್, ಪೋರ್ನ್ ಸ್ಟಾರ್ ಆಗಿ ಮಾರ್ಪಡಲು ಕಾರಣ ಏನು ಎಂಬುದು ಇದೀಗ ಎಲ್ಲರ ಮುಂದಿರುವ ಪ್ರಶ್ನೆ. ಇದಕ್ಕೆ ಒಂದು ವಾರದ ಹಿಂದೆಯೇ ರೆನಿ ಉತ್ತರ ನೀಡಿದ್ದಾಳೆ. ಸಂದರ್ಶನವೊಂದರಲ್ಲಿ ಈ ಕುರಿತು ಹೇಳಿಕೊಂಡಿರುವ ರೆನಿ, “ಸದ್ಯ ನಾನು ನೆಮ್ಮದಿಯಿಂದ ಜೀವನ ನಡೆಸುತ್ತಿರುವೆ. ರೇಸಿಂಗ್ ನಲ್ಲಿ ದುಡ್ಡಿಲ್ಲದ ಕಾರಣ ನಾನು ಬಡತನಕ್ಕೆ ಸಿಲುಕಿದೆ. ಆದರೆ, ಇದೀಗ ನನ್ನ ಬಳಿ ಹೆಸರು, ಹಣ ಹಾಗೂ ಕೆಲಸ ಮೂರು ಇವೆ ಹಾಗೂ ಕರಿಯರ್ ಬದಲಾವಣೆಯ ನಿರ್ಣಯ ನನ್ನ ಜೀವನದ ಅತ್ಯುತ್ತಮ ನಿರ್ಧಾರ” ಎಂದು ಹೇಳಿದ್ದಾಳೆ.

25 ವರ್ಷ ವಯಸ್ಸಿನ ರೆನಿ ಇದೀಗ ತನ್ನ ಕುಟುಂಬದ ಬೆಂಬಲಕ್ಕೂ ನಿಂತಿದ್ದಾಳೆ. ಆಕೆಯ ಕೆಲಸದಿಂದ ಅವಳ ಕುಟುಂಬ ಸದಸ್ಯರಿಗೆ ಯಾವುದೇ ಆಕ್ಷೇಪ ಇಲ್ಲ. ಸಂದರ್ಶನದಲ್ಲಿ ಮಾತನಾಡಿರುವ ರೆನಿ ಮನೆಯಲ್ಲಿ ದುಡ್ಡಿನ ಕೊರತೆ ವ್ಯಾಪಕವಾಗಿ ಕಾಡಲಾರಂಭಿಸಿದ ಕಾರಣ ರೇಸಿಂಗ್ ಬಿಡಬೇಕಾಯಿತು. ತಮ್ಮ ಪಾಲಿಗೆ ಮತ್ತು ತಮ್ಮ ಕುಟುಂಬಸ್ಥರ ಪಾಲಿಗೆ ಇದೊಂದು ಕಠಿಣ ಕಾಲವಾಗಿತ್ತು ಎಂದು ರೆನಿ ಹೇಳಿದ್ದಾಳೆ.

ಸದ್ಯ ತಾವು ರೇಸಿಂಗ್ ಅನ್ನು ತೊರೆದಿರುವುದಾಗಿ ಹೇಳುವ ರೆನಿ, ಹಳೆ ದಿನಗಳನ್ನು ನೆನಪಿಸಲು ತಮಗೆ ಇಷ್ಟ ಇಲ್ಲ ಎನ್ನುತ್ತಾಳೆ.

ಪೋರ್ನ್ ಉದ್ಯಮದಲ್ಲಿ ರೆನಿ ವಾರಕ್ಕೆ 25 ಸಾವಿರ ಡಾಲರ್ ಅಂದರೆ 18 ಲಕ್ಷ ರೂಪಾಯಿ ಸಂಪಾದಿಸುತ್ತಾಳೆ. ಅಂದರೆ, ತಿಂಗಳಿಗೆ ಆಕೆಯ ಸಂಪಾದನೆ 75 ಲಕ್ಷ ರೂ.ಗಳಾಗಿದೆ.

Comments are closed.