ಕರ್ನಾಟಕ

ಅಕ್ರಮ ಸಂಬಂಧದಿಂದ ಹೆಂಡತಿಗೆ ಕೊರೋನಾ ಬಂದಿದೆ: ಆಸ್ಪತ್ರೆಯಲ್ಲಿ ಗಂಡನ ಆರೋಪ!

Pinterest LinkedIn Tumblr


ವಿಜಯಪುರ: ಪತ್ನಿ ಅಕ್ರಮ ಸಂಬಂಧ ಹೊಂದಿದ್ದು, ಹೀಗಾಗಿಯೇ ಆಕೆಗೆ ಕೊರೋನಾ ವೈರಸ್ ಬಂದಿದೆ ಎಂದು ಆಸ್ಪತ್ರೆಯಲ್ಲಿಯೇ ಎಲ್ಲರ ಎದುರು ಕಿರುಚಾಡಿದ ಘಟನೆಯೊಂದು ವಿಜಯಪುರದಲ್ಲಿ ನಡೆದಿದೆ.

ಕೊರೋನಾ ವೈರಸ್ ಸೋಂಕು ತಗಲಿದ್ದ ಮಹಿಳೆಯೊಬ್ಬರನ್ನು ಐಸೋಲೇಷನ್ ವಾರ್ಡ್’ಗೆ ಸ್ಥಳಾಂತರಿಸಲಾಗಿತ್ತು. ಇದೇ ಆಸ್ಪತ್ರೆಯಲ್ಲಿಯೇ ಆಕೆಯ ಪತಿ ಕೂಡ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಮಹಿಳೆ ಆಗಮಿಸುತ್ತಿದ್ದನ್ನು ನೋಡಿದ ಕೂಡಲೇ ಆಕೆಯನ್ನು ನೋಡಿ ಕೂಗಾಡಲು ಆರಂಭಿಸಿದ್ದಾರೆ.

ಈಕೆ ನನ್ನ ಪತ್ನಿಯಾಗಿದ್ದು, ಅಕ್ರಮ ಸಂಬಂಧದಿಂದಾಗಿ ಆಕೆಗೆ ಕೊರೋನಾ ವೈರಸ್ ಬಂದಿದೆ. ಈಕೆಯಿಂದ ದೂರಾಗಿ 2 ವಾರಗಳು ಕಳೆದಿವೆ ಎಂದು ಕೂಗಾಡಲು ಆರಂಭಿಸಿದ್ದರು. ಬಳಿಕ ಹಿರಿಯ ಅಧಿಕಾರಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಎಷ್ಟು ಸಮಾಧಾನ ಪಡಿಸಿದರು ವ್ಯಕ್ತಿ ಸಮಾಧಾನಗೊಂಡಿರಲಿಲ್ಲ. ಬಳಿಕ ವೈದ್ಯರು ಬಂದು ವೈರಸ್ ಯಾವ ರೀತಿ ಹರಡುತ್ತದೆ ಎಂಬುದನ್ನು ವಿವರಿಸಿದಾಗ, ತಪ್ಪನ್ನು ಒಪ್ಪಿಕೊಂಡು, ಮಹಿಳೆ ಬಳಿ ಕ್ಷಮೆಯಾಚಿಸಿದ್ದಾನೆ.

ಇದರ ನಡುವಲ್ಲೇ ಪುತ್ರಿಯೊಂದಿಗೆ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ಮಹಿಳೆಯೊಬ್ಬರಿಗೆ ನೆರೆ ಮನೆಯವರು ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಆಗಾಗ ಮನೆಯ ಬಳಿ ಬರುತ್ತಿದ್ದ ನೆರೆಮನೆಯವರು ಮಹಿಳೆಯ ಹತ್ತಿ ತನ್ನ ತಾಯಿಗೆ ಕರೆ ಮಾಡದಂತೆ ತಿಳಿಸಿ, ದೂರವಾಣಿ ಸಂಭಾಷಣೆಯಿಂದಲೂ ಕೊರೋನಾ ಬಂದು ಬಿಡುತ್ತದೆ ಎಂದು ಹೇಳಿ ಹೋಗುತ್ತಿದ್ದಾರೆಂದು ತಿಳಿದುಬಂದಿದೆ.

Comments are closed.