ಬೆಂಗಳೂರು (ಜೂ. 7): ಬೆಂಗಳೂರಿನಲ್ಲಿ ಮಾನಸಿಕ ಸಮಸ್ಯೆಯಿದ್ದ 34 ವರ್ಷದ ಮಹಿಳೆಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಚಿಕಿತ್ಸೆಗೆ ನಿಮ್ಹಾನ್ಸ್ ಆಸ್ಪತ್ರೆಗೆ ಆಗಮಿಸಿದ್ದ ಮಹಿಳೆಗೆ ಪರೀಕ್ಷೆ ವೇಳೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸೋಂಕು ತಗುಲಿರುವುದು ಖಚಿತವಾಗುತ್ತಿದ್ದಂತೆ ಆ ಮಹಿಳೆಯನ್ನು ಕೂಡಲೇ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನಿಮ್ಹಾನ್ಸ್ನ ಎಮರ್ಜೆನ್ಸಿ ಕಟ್ಟಡಕ್ಕೆ ಆಗಮಿಸಿದ್ದ ಮಹಿಳೆ ಪರೀಕ್ಷೆ ನಡೆಸಿಕೊಂಡಿದ್ದರಿಂದ ಎಮರ್ಜೆನ್ಸಿ ಕಟ್ಟಡವನ್ನು ಸ್ಯಾನಿಟೈಸ್ ಮಾಡಲಾಗಿದೆ. ಆ ರೋಗಿಯ ಸಂಪರ್ಕಕ್ಕೆ ಬಂದಿದ್ದ ಇತರೆ ರೋಗಿಗಳು ಮತ್ತು ನಿಮ್ಹಾನ್ಸ್ ಸಿಬ್ಬಂದಿ ಕ್ವಾರಂಟೈನ್ನಲ್ಲಿ ಇದ್ದಾರೆ.
ಗುರಪ್ಪನ ಪಾಳ್ಯದಲ್ಲಿ ಅಲೆಯುತ್ತಿದ್ದ ಮಾನಸಿಕ ಅಸ್ವಸ್ಥೆಯನ್ನು ಪೋಲೀಸರು ಕರೆತಂದಿದ್ದರು. ಆ ಪ್ರದೇಶ ಹೈ ರಿಸ್ಕ್ ಇದ್ದುದರಿಂದ ಆಕೆಗೆ ಕೊರೋನಾ ಪರೀಕ್ಷೆ ಮಾಡಲಾಯಿತು. ಆಕೆಗೆ ಯಾವುದೇ ರೋಗಲಕ್ಷಣಗಳು ಇರಲಿಲ್ಲ. ಆಕೆಯ ತಾಯಿಯನ್ನು ಪೊಲೀಸರು ಪತ್ತೆಹಚ್ಚಿದ್ದು ಅವರ ಪರೀಕ್ಷೆ ನಡೆಯುತ್ತಿದೆ. ನಿಮ್ಹಾನ್ಸ್ ನಲ್ಲಿ ಸಂಪರ್ಕಕ್ಕೆ ಬಂದಿದ್ದ ಸಿಬ್ಬಂದಿಯ ಪಟ್ಟಿ ತಯಾರಿಸಲಾಗುತ್ತಿದೆ. ನಿನ್ನೆ ರಾತ್ರಿ 10.30ಕ್ಕೆ ಮಹಿಳೆಯ ಟೆಸ್ಟ್ ರಿಸಲ್ಟ್ ಪಾಸಿಟಿವ್ ಎಂದು ಬಂದಿದೆ. ಕೂಡಲೇ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Comments are closed.