ರಾಷ್ಟ್ರೀಯ

ಕೊರೋನಾ ಪಾಸಿಟಿವ್ ವರದಿ ಬಂದ ಒಂದೇ ದಿನವೇ ಮೃತಪಟ್ಟ ಟಿವಿ5 ಪತ್ರಕರ್ತ

Pinterest LinkedIn Tumblr


ಹೈದರಾಬಾದ್(ಜೂನ್ 07): ತೆಲುಗಿನ ಟಿವಿ5 ಸುದ್ದಿವಾಹಿನಿಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದ ಮನೋಜ್ ಕುಮಾರ್ ಅವರು ಕೊರೋನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಭಾನುವಾರ ಬೆಳಗ್ಗೆ 9:30ಕ್ಕೆ ಅವರು ನಿಧನರಾಗಿದ್ಧಾರೆ. ನಿನ್ನೆಯಷ್ಟೇ ಅವರ ಸ್ವಾಬ್ ಮಾದರಿಯ ಪರೀಕ್ಷಾ ವರದಿಯಲ್ಲಿ ಕೊರೋನಾ ಪಾಸಿಟಿವ್ ಬಂದಿತ್ತು. ಒಂದೇ ದಿನದ ಅಂತರದಲ್ಲಿ ಅವರು ಬಲಿಯಾಗಿದ್ಧಾರೆ.

ಹೈದರಾಬಾದ್​ನ ಗಾಂಧಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇವರು ಬೈಲ್ಯಾಟರಲ್ ನ್ಯುಮೋನಿಯಾ ಮತ್ತು ಕೋವಿಡ್-19ನಿಂದ ಸಾವನ್ನಪ್ಪಿದರೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಕೋವಿಡ್ ವೈರಾಣು ಸೋಂಕಿನಿಂದ ಮನೋಜ್ ಕುಮಾರ್ ಅವರ ದೇಹದಲ್ಲಿ ಮಯಾಸ್ತೀನಿಯಾ ಗ್ರಾವಿಸ್ (Myasthenia Gravis) ಸಮಸ್ಯೆಗೆ ತಿರುಗಿತ್ತು. ಇದು ಶ್ವಾಸಕೋಶ ಸ್ನಾಯು ಸೇರಿದಂತೆ ದೇಹದಲ್ಲಿರುವ ಎಲ್ಲಾ ಸ್ನಾಯುಗಳನ್ನೂ ಪ್ಯಾರಲೈಸ್ ಮಾಡುತ್ತದೆ. ಅದಕ್ಕಾಗಿ ಥೈಮಸ್ ಗ್ಲ್ಯಾಂಡ್ ಸರ್ಜರಿ ಕೂಡ ಮಾಡಲಾಗಿತ್ತು. ಆದರೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ.

ವೈದ್ಯಕೀಯ ಸಿಬ್ಬಂದಿ, ಪೊಲೀಸ್, ಪೌರಕಾರ್ಮಿಕರಂತೆ ಪತ್ರಕರ್ತರೂ ಕೂಡ ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಲಾಗಿದೆ. ಕೊರೋನಾ ಸೋಂಕಿನ ಅಪಾಯ ಲೆಕ್ಕಿಸದೆ ವಿವಿಧ ಸ್ಥಳಗಳಿಗೆ ಹೋಗುವ ಅನಿವಾರ್ಯತೆ ಇರುವ ಪತ್ರಕರ್ತರಿಗೆ ಇದೆ.

Comments are closed.