ಕರ್ನಾಟಕ

ಕಳೆದು ತಿಂಗಳು ವಿವಾಹವಾಗಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಗಂಡನ ಅಕ್ರಮ ಸಂಬಂಧ: ತಾಯಿ ಚಾಮುಂಡಿಯನ್ನು ಸ್ಮರಿಸಿ ವಿವಾಹಿತೆ ಆತ್ಮಹತ್ಯೆ

Pinterest LinkedIn Tumblr


ಮೈಸೂರು: ತನ್ನ ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಸರಸ್ವತಿಪುರಂ ಬಳಿಯ ಆನಂದ ನಗರದಲ್ಲಿ ನಡೆದಿದೆ.

24 ವರ್ಷದ ಭಾವನಾ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಒಂದು ತಿಂಗಳ ಹಿಂದಷ್ಟೇ ಸಾಫ್ಟ್‌ವೇರ್ ಎಂಜಿನಿಯರ್ ಅಜಯ್ ಎಂಬುವವರ ಜೊತೆ ಭಾವನಾ ವಿವಾಹವಾಗಿದ್ದರು. ಆದರೆ ಪತಿ ಅಜಯ್ ಮತ್ತೊಬ್ಬ ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಭಾವನಾ ಅವರಿಗೆ ತಿಳಿದುಬಂತು. ಈ ಕುರಿತಾದ ಫೋಟೋಗಳು ಪತಿ ಅಜಯ್ ಮೊಬೈಲ್‍ನಲ್ಲಿದ್ದವು.

ಇದನ್ನೆಲ್ಲಾ ಗಮನಿಸಿದ ಪತ್ನಿ ಭಾವನಾ ಮನನೊಂದು ಮೊಬೈಲ್‌ನಲ್ಲೇ ಡೆತ್‍ನೋಟ್ ಬರೆದು, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್‌ ನೋಟ್‌ನಲ್ಲಿ ನಾನು ತೆಗೆದುಕೊಂಡಿರುವ ನಿರ್ಧಾರ ತಪ್ಪು. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದೂ ಭಾವನಾ ಕೇಳಿಕೊಂಡಿದ್ದಾರೆ.

ತಾಯಿ ಚಾಮುಂಡಿ ನಿಮಗೆ ಒಳ್ಳೆಯದು ಮಾಡಲಿ ಎಂದು ಡೆತ್‍ನೋಟಿನಲ್ಲಿ ಭಾವನಾ ಬರೆದಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.