ಕರ್ನಾಟಕ

ಕೊರೊನಾಗೆ ಪುರೋಹಿತ ಸಾವು: ಹಲವು ಮದುವೆ ಮಾಡಿಸಿದ್ದ ಅರ್ಚಕ!

Pinterest LinkedIn Tumblr

ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ 44 ವರ್ಷದ ಪುರೋಹಿತರೊಬ್ಬರು ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಈ ಘಟನೆ ಜಿಲ್ಲೆಯಲ್ಲಷ್ಟೇ ಅಲ್ಲದೆ ಪಕ್ಕದ ಜಿಲ್ಲೆಗಳಲ್ಲೂ ಆತಂಕಕ್ಕೆ ಕಾರಣವಾಗಿದೆ.

ಮೃತ ಪುರೋಹಿತರು ಮದುವೆ, ಗೃಹಪ್ರವೇಶಗಳನ್ನು ನೆರವೇರಿಸಿ ಕೊಡುತ್ತಿದ್ದರು. ಇತ್ತೀಚೆಗಷ್ಟೇ ಹಲವಾರು ಮದುವೆಗಳನ್ನು ಮಾಡಿಸಿದ್ದಾರೆ. ಜಿಲ್ಲೆಯಲ್ಲಷ್ಟೇ ಅಲ್ಲದೆ ಪಕ್ಕದ ಜಿಲ್ಲೆಗಳಿಗೂ ತೆರಳಿ ಮದುವೆ ಮಾಡಿಸಿದ್ದಾರೆ.

ಇದೀಗ ಈ ಪುರೋಹಿತರು ಮದುವೆ ಮಾಡಿಸಿರುವ ವಧು-ವರರಿಗೆ ಪೀಕಲಾಟ ಶುರುವಾಗಿದೆ. ಮದುವೆಯಲ್ಲಿ ಸೇರಿದ್ದವರಿಗೂ ಕೊರೊನಾ ಆತಂಕ ಶುರುವಾಗಿದೆ.

ಈ ಪುರೋಹಿತ ಸಾಯುವ ಮುನ್ನ ಗಂಜಿ ಬಸವೇಶ್ವರ ಓಣಿಯಲ್ಲಿ ಮದುವೆ ಮಾಡಿಸಿದ್ದರು. ಈ ಮದುವೆಯಲ್ಲಿ ಸೋಂಕು ತಗುಲಿರುವ ಶಂಕೆ ಮೂಡಿದೆ.

ಆರೋಗ್ಯ ಅಧಿಕಾರಿಗಳು ಈಗಾಗಲೇ ಲಕ್ಕುಂಡಿ ಗ್ರಾಮವನ್ನು ಸೀಲ್‌ಡೌನ್‌ ಮಾಡಿದ್ದಾರೆ. ಪುರೋಹಿತರ ಟ್ರಾವೆಲ್‌ ಹಿಸ್ಟರಿಯನ್ನು ಸಂಗ್ರಹಿಸುತ್ತಿದ್ದಾರೆ.

ಗದಗ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 35 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದುವೆರೆಗೆ 17 ಮಂದಿ ಪೂರ್ಣವಾಗಿ ಗುಣವಾಗಿದ್ದಾರೆ. 17 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ಒಬ್ಬರು (ಪುರೋಹಿತ) ಸೋಂಕಿಗೆ ಬಲಿಯಾಗಿದ್ದಾರೆ.

Comments are closed.