ರಾಷ್ಟ್ರೀಯ

ದೇಶದಲ್ಲಿ 9304 ಕೊರೋನಾ ಪ್ರಕರಣಗಳು ಪತ್ತೆ: 260 ಸಾವು

Pinterest LinkedIn Tumblr


ನವದೆಹಲಿ:ಕಳೆದ 24 ಗಂಟೆಯಲ್ಲಿ ಭಾರತದಲ್ಲಿ ದಾಖಲೆ ಎಂಬಂತೆ 9,304 ಕೋವಿಡ್ 19 ಪ್ರಕರಣ ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಕೋವಿಡ್ 19 ಪೀಡಿತರ ಸಂಖ್ಯೆ 2,16,919ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

ಅತೀ ಹೆಚ್ಚು ಕೋವಿಡ್ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಈಗ ಏಳನೇ ಸ್ಥಾನ ಪಡೆದುಕೊಂಡಿದೆ. ಅಮೆರಿಕ, ಬ್ರೆಜಿಲ್, ರಷ್ಯಾ, ಯುನೈಟೆಡ್ ಕಿಂಗ್ ಡಮ್, ಸ್ಪೇನ್ ಮತ್ತು ಇಟಲಿ ಮಾತ್ರ ಅತೀ ಹೆಚ್ಚು ಕೋವಿಡ್ 19 ಪ್ರಕರಣದ ದೇಶಗಳಾಗಿದ್ದು, ಇದೀಗ ಭಾರತ ಕೂಡಾ ಸೇರ್ಪಡೆಗೊಂಡಿದೆ.

ಕಳೆದ 24 ಗಂಟೆಯಲ್ಲಿ ಭಾರತದಲ್ಲಿ ಕೋವಿಡ್ 19 ವೈರಸ್ ನಿಂದ 260 ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ 122, ದಿಲ್ಲಿಯಲ್ಲಿ 50, ಗುಜರಾತ್ ನಲ್ಲಿ 30, ತಮಿಳುನಾಡಿನಲ್ಲಿ 11, ಪಶ್ಚಿಮಬಂಗಾಳದಲ್ಲಿ 10, ಮಧ್ಯಪ್ರದೇಶದಲ್ಲಿ 07, ಉತ್ತರಪ್ರದೇಶದಲ್ಲಿ 07 ಮತ್ತು ತೆಲಂಗಾಣದಲ್ಲಿ 07, ರಾಜಸ್ಥಾನದಲ್ಲಿ 06, ಆಂಧ್ರಪ್ರದೇಶದಲ್ಲಿ 04, ಬಿಹಾರದಲ್ಲಿ 01, ಚತ್ತೀಸ್ ಗಢದಲ್ಲಿ 01, ಜಮ್ಮು ಮತ್ತು ಕಾಶ್ಮೀರದಲ್ಲಿ 01, ಕರ್ನಾಟಕದಲ್ಲಿ 01, ಪಂಜಾಬ್ 01, ಉತ್ತರಾಖಂಡ್ ನಲ್ಲಿ 01 ಸೇರಿದಂತೆ ಒಟ್ಟು 260 ಜನರು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

Comments are closed.