ಕರ್ನಾಟಕ

ರಾಜ್ಯದಲ್ಲಿ ನೂರು ಮಂದಿಗೆ ಕೊರೋನಾ ಸೋಂಕು ದೃಢ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಇಂದು ಮಧ್ಯಾಹ್ನದವರೆಗೆ ಒಟ್ಟು ನೂರು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ, 2,282ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಸೋಮವಾರ ಸಂಜೆಯಿಂದ ಮಂಗಳವಾರ ಮಧ್ಯಾಹ್ನದವರೆಗೆ ಬರೋಬ್ಬರಿ 100 ಕೊರೋನಾ ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 2282ಕ್ಕೇರಿಕೆಯಾಗಿದೆ.

ಕೋಲಾರದಲ್ಲಿ 2, ಯಾದಗಿರಿ 14, ದಕ್ಷಿಣ ಕನ್ನಡದಲ್ಲಿ 3, ಬಾಗಲಕೋಟೆಯಲ್ಲಿ 1, ವಿಜಯಪುರದಲ್ಲಿ 5, ದಾವಣಗೆರೆಯಲ್ಲಿ 11, ಬೀದರ್ ನಲ್ಲಿ 10, ಹಾಸನ 13, ಉಡುಪಿ 3, ಚಿಕ್ಕಬಳ್ಳಾಪುರದಲ್ಲಿ 1, ಚಿತ್ರದುರ್ಗದಲ್ಲಿ 19, ಕೊಪ್ಫಳದಲ್ಲಿ1, ಬಳ್ಳಾರಿಯಲ್ಲಿ 1, ಬೆಂಗಳೂರು ನಗರ 2, ಬೆಳಗಾವಿ 11 ಪ್ರಕರಣಗಳು ವರದಿಯಾಗಿವೆ.

ಇವರಲ್ಲಿ ಬಹುತೇಕರು ಹೊರರಾಜ್ಯಗಳ ಪ್ರಯಾಣದ ಇತಿಹಾಸ ಹೊಂದಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು ಮತ್ತು ಜಾರ್ಖಂಡ್ ಪ್ರವಾಸ ಕೈಗೊಂಡ ಹಲವರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇಲ್ಲಿಯವರೆಗೆ ರಾಜ್ಯದಲ್ಲಿ 46 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಒಟ್ಟು 722 ಮಂದಿ ಗುಣಮುಖರಾಗಿದ್ದು, ಒಟ್ಟು 1514 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Comments are closed.