ರಾಷ್ಟ್ರೀಯ

ಗಂಡ ಕ್ವಾರಂಟೈನ್‌ನಲ್ಲಿ, ಹೆಂಡ್ತಿ ಪ್ರಿಯಕರನ ತೋಳಿನಲ್ಲಿ..!: ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಡೆದ ಘಟನೆ

Pinterest LinkedIn Tumblr


ಭೋಪಾಲ್ (ಮಧ್ಯಪ್ರದೇಶ): ಕ್ವಾರಂಟೈನ್‌ನಲ್ಲಿರುವ ಮಧ್ಯಪ್ರದೇಶದ ವ್ಯಕ್ತಿಯೊಬ್ಬ ತನ್ನ ಪತ್ನಿ ವಿರುದ್ಧವೇ ದೂರು ದಾಖಲಿಸಿದ್ದಾನೆ. ಇಲ್ಲಿನ ಛತ್ತರ್‌ಪುರ ಜಿಲ್ಲೆಯ ವಲಸೆ ಕಾರ್ಮಿಕ, ಇದೀಗ ತನ್ನ ಹೆಂಡತಿಯನ್ನು ಹುಡುಕಿಕೊಡುವಂತೆ ದೂರು ದಾಖಲಿಸಿದ್ದಾನೆ. ಏಕೆಂದರೆ, ಆತನ ಹೆಂಡತಿ ತನ್ನ ಪ್ರಿಯಕರನ ಜೊತೆ ಪರಾರಿ ಆಗಿದ್ದಾಳಂತೆ..!

ಮೂರು ಮಕ್ಕಳ ತಾಯಿಯಾಗಿರುವ 46 ವರ್ಷದ ಮಹಿಳೆ, ತನ್ನ 50 ವರ್ಷದ ಪತಿಯನ್ನು ತೊರೆದು ಪರಾರಿಯಾಗಿದ್ದಾಳೆ. ಪೊಲೀಸರು ಈ ಸಂಬಂಧ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆಗಾಗಿ ಹುಡುಕಾಟ ಆರಂಭಿಸಿದ್ದಾರೆ.

ದಿಲ್ಲಿಯಲ್ಲಿ ಕಟ್ಟಡ ನಿರ್ಮಾಣ ಸಂಸ್ಥೆಯೊಂದರ ಕಾರ್ಮಿಕನಾಗಿದ್ದ ವ್ಯಕ್ತಿ, ಮಧ್ಯಪ್ರದೇಶದ ಛತ್ತರಪುರ ಜಿಲ್ಲೆಯ ಮುಂದೇರಿ ಗ್ರಾಮಕ್ಕೆ ವಾಪಸ್ಸಾದ. ಆದ್ರೆ, ಆತನನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಆತ ಸ್ವಗ್ರಾಮಕ್ಕೆ ಬರುವ ಒಂದೂವರೆ ವರ್ಷದ ಮುನ್ನವೇ ಪತ್ನಿ ಹಾಗೂ ಮಕ್ಕಳು ಗ್ರಾಮಕ್ಕೆ ಆಗಮಿಸಿದ್ದರು. ಇದೀಗ ದಿಲ್ಲಿಯಿಂದ ವಾಪಸ್ಸಾಗಿ ಕ್ವಾರಂಟೈನ್‌ ಮುಗಿಸಿ ಮನೆಗೆ ಬಂದು ನೋಡಿದರೆ ಪತ್ನಿ ನಾಪತ್ತೆಯಾಗಿದ್ದಾರೆ.

ಮೇ 19ರಂದೇ ಸ್ವಗ್ರಾಮಕ್ಕೆ ಈ ವ್ಯಕ್ತಿ ಮರಳಿದ್ದ. ಶ್ರಮಿಕ್ ರೈಲಿನಲ್ಲಿ ತವರಿಗೆ ಬಂದು ಕ್ವಾರಂಟೈನ್ ಮುಗಿಸಿದ ಬಳಿಕ ಪತ್ನಿಗಾಗಿ ಈತ ಹುಡುಕಾಟ ಆರಂಭಿಸಿದ್ಧಾನೆ. ಆದ್ರೆ, ಪತ್ನಿ ಎಲ್ಲಿಯೂ ಸಿಗದ ಕಾರಣ, ಇದೀಗ ಪೊಲೀಸರ ಮೊರೆ ಹೋಗಿದ್ದಾನೆ.

ಮೇ 19ರಂದು ಸ್ವಗ್ರಾಮಕ್ಕೆ ಮರಳಿದ ಬಳಿಕ, ತನ್ನ ಮನೆಯ ಮೊದಲ ಮಹಡಿಯಲ್ಲಿ ಈತ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದ. ಪತ್ನಿ ಹಾಗೂ ಮಕ್ಕಳು ಅದೇ ಮನೆಯ ಗ್ರೌಂಡ್ ಫ್ಲೋರ್‌ನಲ್ಲಿ ನೆಲೆಸಿದ್ದರು. ಆರಂಭದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಆದ್ರೆ, ಮೇ 24ರಂದು ಬೆಳಗ್ಗೆ ಎದ್ದು ನೋಡಿದರೆ, ಮನೆಯ ಮುಂಬಾಗಿಲು ಚಿಲಕ ಹಾಕಿತ್ತು. ಆತ ಮನೆಯಿಂದ ಹೊರಬರಲು ಸಾಧ್ಯವಾಗದಂತೆ ಬಾಗಿಲು ಹಾಕಲಾಗಿತ್ತು. ಹೇಗೋ ಸಾಹಸ ಮಾಡಿ ಹೊರಂದು ನೋಡಿದರೆ ಮಕ್ಕಳು ಮಾತ್ರ ಇದ್ದವು. ಪತ್ನಿ ಇರಲಿಲ್ಲ ಎಂದೂ ದೂರಿನಲ್ಲಿ ತಿಳಿಸಿದ್ದಾನೆ.

ಕ್ವಾರಂಟೈನ್‌ನಲ್ಲಿ ಇದ್ದ ಕಾರಣ, ಮುಖಕ್ಕೆ ಬಟ್ಟೆ ಸುತ್ತಿಕೊಂಡು ಆತ ಗ್ರಾಮದ ಮನೆ ಮನೆಯಲ್ಲೂ ವಿಚಾರಣೆ ನಡೆಸಿದ. ತನ್ನ ಸಂಬಂಧಿಕರಲ್ಲೂ ವಿಚಾರಣೆ ನಡೆಸಿದ. ಸುಳಿವೇ ಸಿಗದಿದ್ದಾಗ, ಅನಿವಾರ್ಯವಾಗಿ ಪೊಲೀಸರಿಗೆ ದೂರು ನೀಡಿದ್ದಾನೆ.

Comments are closed.