
ಬೆಂಗಳೂರು: ಯುವಜನರು ಸುಲಭವಾಗಿ ಕೊರೊನಾ ಸೋಂಕಿಗೊಳಗಾಗುವುದಿಲ್ಲ ಎಂಬುದು ಸರಿಯೋ ತಪ್ಪೋ? ಖಂಡಿತ ತಪ್ಪು ಎನ್ನುತ್ತಾರೆ ಎಚ್‌ಸಿಜಿ ಆಸ್ಪತ್ರೆಯ ತಜ್ಞರು.
ಎಚ್‌ಸಿಜಿ ಆಸ್ಪತ್ರೆಯ ಡಾ.ಯು.ಎಸ್.ವಿಶಾಲ್ ರಾವ್ ಹಾಗೂ ಸುಬ್ರಮಣಿಯನ್ ತಂಡ 244 ಕೇಸ್‌ನಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ ಈ ಅಂಶ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಒಟ್ಟು ಮಾದರಿಗಳಲ್ಲಿ 20-49 ವರ್ಷ ವಯಸ್ಸಿನೊಳಗಿನವರ ಪ್ರಮಾಣ ಶೇ.60 ರಷ್ಟಿದೆ. ಈ ಪೈಕಿ 20-39 ವರ್ಷ ವಯಸ್ಸಿನವರು ಇನ್ನೂ ಬೇಗನೆ ಸೋಂಕಿಗೊಳಗಾಗುವಂತಹ ಲಕ್ಷಣ ಹೊಂದಿದ್ದಾರೆ. ಮಾದರಿಗಳ ಪೈಕಿ ಈ ವಯೋಮಾನದವರ ಪ್ರಮಾಣ ಶೇ.45 ರಷ್ಟಿದೆ. ಆದರೆ ರೋಗ ನಿರೋಧಕ ಶಕ್ತಿ ಹೆಚ್ಚು ಇರುವುದರಿಂದ ಈ ವಯಸ್ಸಿನವರು ಬೇಗನೆ ಗುಣಮುಖರಾಗುತ್ತಾರೆ. ಸೋಂಕಿಗೊಳಗಾದ ಯುವಕ ಅಥವಾ ಯುವತಿ ಗುಣಮುಖರಾಗಲು ಸರಾಸರಿ 17.5 ದಿನಗಳು ಬೇಕಾಗುತ್ತವೆ. ಅಂದರೆ ಇಷ್ಟು ದಿನಗಳ ಕಾಲ ರೋಗಿ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.
ಡಾ.ವಿಶಾಲ್ ರಾವ್, ”ಲಾಕ್ ಡೌನ್ ಸಡಿಲವಾದ ನಂತರ ಯುವಜನರು ಹೆಚ್ಚು ತಿರುಗಾಡುತ್ತಿದ್ದಾರೆ. ಅವರಿಗೆ ಬಹಳ ವೇಗವಾಗಿ ಸೋಂಕು ತಗುಲುತ್ತದೆ. ಅವರು ಬೇಗನೆ ಗುಣಮುಖರಾಗಬಹದು. ಆದರೆ ಅವರಿಂದ ಮನೆಯಲ್ಲಿರುವ ಹಿರಿಯರಿಗೆ ಸೋಂಕು ತಗುಲಿದರೆ ಕಷ್ಟ,” ಎಂದು ವಿವರಿಸಿದರು.
ಗುಣಮುಖ ಪ್ರಮಾಣ
* ಶೇ. 10ರಷ್ಟಿರುವ 50-59 ವಯೋಮಾನದವರು ಗುಣಮುಖರಾಗಲು ಸರಾಸರಿ 19.6 ದಿನಗಳು ಬೇಕಾಗುತ್ತವೆ. ಗುಣಮುಖ ಪ್ರಮಾಣ ಪ್ರಮಾಣ ಶೇ.23 ರಷ್ಟಿದೆ.
* 60-69 ವರ್ಷ ವಯಸ್ಸಿನವರು ಗುಣಮುಖರಾಗುವ ಸಾಧ್ಯತೆ ಬಹಳ ಕಡಿಮೆ.
* 70-80 ವರ್ಷ ವಯಸ್ಸಿನವರು ಗುಣಮುಖರಾಗುವವರು ಶೇ.22 ರಷ್ಟಿದೆ. ಮರಣ ಪ್ರಮಾಣ ಶೇ. 30.76 ರಷ್ಟಿದೆ.
Comments are closed.