ಬೆಂಗಳೂರು: ಮೇ 17ರ ನಂತರ ರಾಜ್ಯದಲ್ಲಿ ಲಾಕ್ಡೌನ್‌ಗೆ ಕೆಲವು ಸಡಿಲಿಕೆ ನೀಡಲಾಗಿದೆ. ಭಾನುವಾರ ಸಂಪೂರ್ಣ ಲಾಕ್‌ಡೌನ್ ವಿಧಿಸಿದೆ. ಆದರೆ, ಭಾನುವಾರವೇ ಮದುವೆ ಡೇಟ್ ಫಿಕ್ಸ್ ಆಗಿದ್ದವರ ಗತಿ ಏನು ಎಂಬ ಪ್ರಶ್ನೆಮೂಡಿತ್ತು. ಈ ಪ್ರಶ್ನೆಗೆ ಸರಕಾರವೇ ಉತ್ತರ ನೀಡಿದೆ.
ಭಾನುವಾರ ಪೂರ್ಣ ದಿನ ಲಾಕ್‌ಡೌನ್ ಮುಂದುವರಿಯಲಿವೆ. ಆದರೂ, ಮಮದುವೆ ಸಮಾರಂಭಗಳು ಈ ಮೊದಲೇ ನಿಗದಿಯಾಗಿದ್ದರೆ, ಈ ಸಮಾರಂಭಗಳನ್ನು ವಿಶೇಷ ಪ್ರಕರಣಗಳೆಂದು ಪರಿಗಣಿಸಿರುವ ರಾಜ್ಯ ಸರಕಾರ ಅನುಮತಿ ನೀಡಿದೆ.
ಆದರೆ, ಮದುವೆಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವುದು ಕಡ್ಡಾಯ. ಸಮಾರಂಭದಲ್ಲಿ ಗರಿಷ್ಠ ಅತಿಥಿಗಳ ಸಂಖ್ಯೆಯನ್ನು 50ಕ್ಕೆ ಸೀಮಿತಗೊಳಿಸಲಾಗಿದೆ. ಅಂದರೆ, 50 ಜನರಿಗಿಂತ ಹೆಚ್ಚು ಜನ ಭಾಗವಹಿಸುವಂತಿಲ್ಲ. ಕೇಂದ್ರ ಸರಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಸರಳ ಮದುವೆಗಳಿಗೆ ಅನುಮತಿ ನೀಡಲಾಗಿದೆ ಎಂದು ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಭಾನುವಾರವೇ ಮದುವೆ ಇದ್ದರೆ ಏನು ಗತಿ? ಎಂಬ ಕುರಿತು ದಿನಪತ್ರಿಕೆ ವರದಿ ಮಾಡಿತ್ತು. ಇದೀಗ ರಾಜ್ಯ ಸರಕಾರ ಪತ್ರಿಕೆಯ ವರದಿಗೆ ಸ್ಪಂದಿಸಿದೆ. ಭಾನುವಾರದಂದು ಮದುವೆಗಳಷ್ಟೇ ಅಲ್ಲದೆ, ಅತ್ಯವಶ್ಯ ಚಟುವಟಿಕೆಗಳಿಗೂ ಅವಕಾಶ ಇರಲಿದೆ.
ಸರಕಾರ ಮದುವೆಗಳಿಗೆ ವಿಧಿಸಿರುವ 17 ಷರತ್ತುಗಳು ಹಲವಾರು ಜಿಜ್ಞಾಸೆಗಳಿಗೆ ಕಾರಣವಾಗಿದೆ. ಸರಕಾರದ ಸುತ್ತೋಲೆ ಪ್ರಕಾರ, 60 ವರ್ಷ ಮೀರಿದ ಹಿರಿಯರು ಮದುವೆಯಲ್ಲಿ ಭಾಗವಹಿಸುವಂತಿಲ್ಲ. ಒಂದೊಮ್ಮೆ ವಧು-ವರರ ಹೆತ್ತವರಿಗೆ 60 ವರ್ಷ ದಾಟಿದ್ದರೆ ಅವರೂ ಭಾಗವಹಿಸಬಾರದೇ ಎಂಬ ಪ್ರಶ್ನೆ ಪ್ರಮುಖವಾಗಿ ಉದ್ಭವಿಸಿದೆ. ಆದರೆ, ಈ ಕುರಿತು ಸರಕಾರದ ಆದೇಶದಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ.
Comments are closed.