ಕರ್ನಾಟಕ

ಬೆಂಗಳೂರಿನಲ್ಲಿ ಕೊರೋನಾಗೆ ಇಬ್ಬರು ಸಾವು: ರಾಜ್ಯದಲ್ಲಿ 10ಕ್ಕೆ ಏರಿಕೆ ಕಂಡ ಮೃತರ ಸಂಖ್ಯೆ

Pinterest LinkedIn Tumblr


ಬೆಂಗಳೂರು(ಏ.14): ಮಾರಕ ಕೊರೋನಾ ವೈರಸ್​ಗೆ ಇಂದು ಬೆಂಗಳೂರಿನಲ್ಲಿ ಇಬ್ಬರು ಬಲಿಯಾಗಿದ್ದಾರೆ. 75 ವರ್ಷ ಮೇಲ್ಪಟ್ಟ ಇಬ್ಬರು ಕೋವಿಡ್​​-19 ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಇಂದು ಮತ್ತೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇಂದು ಮತ್ತೆ 13 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 260ಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಬಾಗಲಕೋಟೆಯಲ್ಲಿ ಮೂವರಿಗೆ ಕೊರೋನಾ ಬಂದಿದೆ. ಜತೆಗೆ ಚಿಕ್ಕಬಳ್ಳಾಪುರದಲ್ಲಿ ಒಬ್ಬರಿಗೆ, ಬೆಂಗಳೂರು ನಗರ ಮತ್ತು ಕಲಬುರ್ಗಿಯಲ್ಲಿ ತಲಾ ಮೂವರಿಗೆ, ವಿಜಯಪುರ ಮತ್ತು ಬೆಳಗಾವಿಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಹಾಗೆಯೇ ಉತ್ತರ ಕನ್ನಡದಲ್ಲೂ ಒಬ್ಬರಿಗೆ ಕೋವಿಡ್​-19 ಇರುವುದು ಧೃಡಪಟ್ಟಿದೆ.

ಜಿಲ್ಲಾವಾರು ಅಂಕಿ ಅಂಶ ಹೀಗಿದೆ…

ಬೆಂಗಳೂರು – 80 ಪ್ರಕರಣ
ಮೈಸೂರು – 48 ಪ್ರಕರಣ
ದಕ್ಷಿಣ ಕನ್ನಡ – 12 ಪ್ರಕರಣ
ಬೆಳಗಾವಿ – 18ಪ್ರಕರಣ
ಉತ್ತರ ಕನ್ನಡ – 9 ಪ್ರಕರಣ
ಚಿಕ್ಕಬಳ್ಳಾಪುರ – 9 ಪ್ರಕರಣ
ಕಲಬುರಗಿ – 16 ಪ್ರಕರಣ
ಬೆಂಗಳೂರು ಗ್ರಾಮಾಂತರ – 05 ಪ್ರಕರಣ
ಬೀದರ್ – 13 ಪ್ರಕರಣ
ದಾವಣಗೆರೆ – 3 ಪ್ರಕರಣ
ಉಡುಪಿ – 3 ಪ್ರಕರಣ
ಬಳ್ಳಾರಿ – 6 ಪ್ರಕರಣ
ಕೊಡಗು – 1 ಪ್ರಕರಣ
ಧಾರವಾಡ – 6 ಪ್ರಕರಣ
ತುಮಕೂರು – 1 ಪ್ರಕರಣ
ಬಾಗಲಕೋಟೆ – 12 ಪ್ರಕರಣ
ಮಂಡ್ಯ – 8 ಪ್ರಕರಣ
ಗದಗ – 1 ಪ್ರಕರಣ
ವಿಜಯಪುರ – 7 ಪ್ರಕರಣ

Comments are closed.