ರಾಷ್ಟ್ರೀಯ

ಕೊರೋನಾ ವಿರುದ್ಧದ ಹೋರಾಟದಲ್ಲಿ ಜಯಗಳಿಸಲು ಮೋದಿ ಸಪ್ತ ಸೂತ್ರ

Pinterest LinkedIn Tumblr


ನವದೆಹಲಿ: ಮಾರಕ‌ ಕೊರೋನಾ ವಿರುದ್ಧದ ಹೋರಾಟದಲ್ಲಿ ಜಯಗಳಿಸಲು ಲಾಕ್‍ಡೌನ್ (Lockdown) ನಿಯಮಗಳನ್ನು ಪಾಲಿಸಿ ಎಂದು ಮನವಿ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಈ ವೇಳೆ ಸಪ್ತ ಸೂತ್ರವನ್ನು ಪಾಲಿಸಿ ಎಂದು ದೇಶವಾಸಿಗಳಿಗೆ ಕರೆ ನೀಡಿದರು‌.

ಮೋದಿ ಹೇಳಿದ ಸಪ್ತ ಸೂತ್ರಗಳು:

1) ನಿಮ್ಮ ನಿಮ್ಮ ಮನೆಗಳಲ್ಲಿರುವ ಹಿರಿಯ ನಾಗರಿಕರು ಮತ್ತು ಮಕ್ಕಳ ಬಗ್ಗೆ ಹೆಚ್ಚು ಜಾಗೃತೆ ವಹಿಸಿ.

2) ಈ ಸಂದರ್ಭದಲ್ಲಿ ನಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವು ಅತ್ಯಗತ್ಯ. ಆದುದರಿಂದ ಆಯುಷ್ಯ ಇಲಾಖೆ ಸೂಚಿಸಿರುವ ಕ್ರಮಗಳನ್ನು ಕೈಗೊಳ್ಳಿ.

3) ಕೊರೋನಾ ಕೋವಿಡ್ 19 (Covid-19) ಸೋಂಕು ಹರಡುತ್ತಿರುವ ಬಗ್ಗೆ ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ. ಬೇರೆಯವರಿಗೂ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಲು ತಿಳಿಸಿ.

4) ಕೊರೋನಾ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿರುವ ಬಡವರು ಮತ್ತು ನಿರ್ಗತಿಕರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ.

5) ಕೊರೋನಾ ಸೋಂಕು ನಮಗೆ ತಲುಪುವುದನ್ನು ತಡೆಯಲು ಬಿಸಿ ನೀರು‌ ಕುಡಿಯಿರಿ.

6) ದೇಶದ ಯಾವುದೇ ಕಂಪನಿಗಳು ತಮ್ಮ ನೌಕರರನ್ನು ಈ ಕಷ್ಟಕಾಲದಲ್ಲಿ ಕೆಲಸದಿಂದ ತೆಗೆಯಬಾರದು. ಎಲ್ಲರಿಗೂ ಈ ಕೆಲಸ ಬಹಳ ಅನಿವಾರ್ಯ.

7) ಕೊರೋನಾ ಮಹಾಮಾರಿ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೌರ ಕಾರ್ಮಿಕರು ಮತ್ತು ಪೊಲೀಸರಿಗೆ ಗೌರವಕೊಡಿ.

Comments are closed.