
ಬೆಂಗಳೂರು: ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಹರಸಾಹಸ ಪಡುತ್ತಿದ್ದು, ಪ್ರತಿನಿತ್ಯ ಸಭೆ ಮೇಲೆ ಸಭೆ ನಡೆಸಿ, ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಪ್ರತಿನಿತ್ಯ ಪರಾಮರ್ಶೆ ನಡೆಸಲು ರಾಜ್ಯ ಸರ್ಕಾರ ಸಮಿತಿಯೊಂದನ್ನು ನೇಮಿಸಿದೆ.
ಸಾರ್ವಜನಿಕ ಆರೋಗ್ಯ ತಜ್ಞರಾದ ಡಾ.ಎಂ.ಕೆ.ಸುದರ್ಶನ್ ಅವರನ್ನು ಈ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹಾಗೆಯೇ, ಸಾಂಕ್ರಾಮಿಕ ರೋಗಶಾಸ್ತ್ರಜ್ಞರಾದ ಡಾ.ಗಿರಿಧರ್ ಬಾಬು, ಡಾ.ಪ್ರದೀಪ್, ಡಾ. ಗುರುರಾಜ್, ನಿಮ್ಹಾನ್ಸ್ನ ವೈರಾಣು ತಜ್ಞರಾದ ಡಾ.ವಿ.ರವಿ ಮತ್ತು ಡಾ.ಅನಿತಾ, ಬಿಎಂಸಿಆರ್ಐನ ಎಚ್ಒಡಿ ಡಾ.ಕೆ.ರವಿ ಹಾಗೂ ಬಿಎಂಸಿಆರ್ಐನ ಶ್ವಾಸಕೋಶ ತಜ್ಞರಾದ ಡಾ.ಶಶಿ ಭೂಷಣ್ ಅವರನ್ನು ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಮತ್ತು ಸಿಎಂಡಿಯ ಜಂಟಿ ನಿರ್ದೇಶಕರಾದ ಡಾ.ಪ್ರಕಾಶ್ ಅವರನ್ನು ಕಾರ್ಯದರ್ಶಿ ಸದಸ್ಯರನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ.
ಈ ಸಮಿತಿಯೂ ಪ್ರತಿದಿನ ರಾಜ್ಯದಲ್ಲಿನ ಕೊರೋನಾ ವೈರಸ್ ಸ್ಥಿತಿಗತಿ ಬಗ್ಗೆ ಪ್ರತಿದಿನ ಪರಾಮರ್ಶೆ ನಡೆಸಲಿದೆ. ಮತ್ತು ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲಿದೆ.
Comments are closed.