
ಬೆಂಗಳೂರು(ಏ.12): ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತ ಇಡೀ ಕರ್ನಾಟಕವನ್ನು ಲಾಕ್ ಡೌನ್ ಮಾಡಲಾಗಿದೆ. ಸದಾ ಗಿಜಿಗಿಜಿಗುಡುವ ಬೆಂಗಳೂರು ಜನ ಮತ್ತು ವಾಹನ ಸಂಚಾರ ಹೊರತುಪಡಿಸಿ ಬಹುತೇಕ ಸ್ತಬ್ದಗೊಂಡಿದೆ. ಸರ್ಕಾರದ ಆದೇಶದ ಮೇರೆಗೆ ಕೆಲ ಅಂಗಡಿ-ಮುಂಗಟ್ಟುಗಳಷ್ಟೇ ಬಾಗಿಲು ತೆರೆದಿವೆ. ರಸ್ತೆ ಬದಿ ಹೋಟೆಲ್ಗಳೆಲ್ಲವೂ ಬಂದ್ ಆಗಿವೆ. ಬಡವರಿಗೆ ಊಟ ಮಾಡಲು ಅವಕಾಶ ಇದ್ದ ಇಂದಿರಾ ಕ್ಯಾಂಟೀನ್ಗಳೂ ಮುಚ್ಚಿವೆ. ರಸ್ತೆಬದಿ ಹೋಟೆಲ್ಗಳನ್ನು ನಂಬಿಕೊಂಡಿದ್ದ ನಿರ್ಗತಿಕರು ಊಟಕ್ಕಾಗಿ ಪರದಾಡುವಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ಬಡವರು ಮತ್ತು ನಿರ್ಗತಿಕರ ಸಹಾಯಕ್ಕೆ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮುಂದಾಗಿದ್ದಾರೆ.
ಹೌದು, ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಬಡವರು ಮತ್ತು ನಿರ್ಗತಿಕರಿಗೆ ಆಹಾರ ಮತ್ತು ಸಾಮಗ್ರಿ ವಿತರಣೆ ಮಾಡುತ್ತಿದ್ದಾರೆ. ಬೆಂಗಳೂರಿನ ಬಿಟಿಎಂ ಲೇ ಔಟ್ ಕ್ಷೇತ್ರದಲ್ಲಿ ಬಡಜನತೆಗೆ ಅಗತ್ಯ ವಸ್ತುಗಳ ವಿತರಣೆ ಮಾಡಲಾಗುತ್ತಿದೆ.
ರಾಜ್ಯ ಸರ್ಕಾರದ ಸಹಕಾರದೊಂದಿಗೆ ದಾನಿಗಳ ಜೊತೆಗೂಡಿ ಆಹಾರ ತಯಾರಿ ಮಾಡುತ್ತಿದ್ದಾರೆ. ಮಾರ್ಚ್ 30ರಿಂದ ಬಿಟಿಎಂ ಲೇಔಟ್ನ ಕಲ್ಯಾಣ ಮಂಟಪವೊಂದರಲ್ಲಿ ಆಹಾರ ತಯಾರಿಸಿ 12 ಸಾವಿರ ಊಟದ ಪಾಕೆಟ್ಗಳನ್ನು ಬರವರಿಗೆ ವಿತರಿಸಲಾಗುತ್ತಿದೆ.
ಕೊರೋನಾದಿಂದ ಬೀದಿಗೆ ಬಂದ ಜನರಿಗೆ ಉಚಿತ ಆಹಾರ ನೀಡಲಾಗುತ್ತಿದೆ. ಇದಕ್ಕೆ ಸ್ಥಳೀಯ ನಾಯಕರ ಮತ್ತು ಸರ್ಕಾರದ ಸಹಾಕರವಿದೆ. ಲಾಕ್ಡೌನ್ ಮುಗಿದ ಮೇಲೂ ಒಂದಷ್ಟು ದಿನ ಈ ಕಾರ್ಯ ಮುಂದುವರಿಯಲಿದೆ ಎಂದರು ರಾಮಲಿಂಗಾ ರೆಡ್ಡಿ.
ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಬಡವರಿಗೆ ಸಹಾಯ ಮಾಡುವ ಮೂಲಕ ಹಲವು ರಾಜಕಾರಣಿಗಳಿಗೆ ರಾಮಲಿಂಗಾ ರೆಡ್ಡಿಯವರು ಮಾದರಿಯಾಗಿದ್ದಾರೆ. ಹೀಗೆ ಮಾನವೀಯತೆ ಮೆರೆದ ಇವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
Comments are closed.