ಕರ್ನಾಟಕ

ಯಡಿಯೂರಪ್ಪ ನಗರ ಪ್ರದಕ್ಷಿಣೆ: ಲಾಕ್‌ಡೌನ್ ಕಟ್ಟುನಿಟ್ಟಿನ ಜಾರಿಗೆ ಪೊಲೀಸರಿಗೆ ತಾಕೀತು

Pinterest LinkedIn Tumblr


ಬೆಂಗಳೂರು: ಕೊರೊನಾ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ, ಬೆಂಗಳೂರಿನ ಸ್ಥಿತಿಗತಿ ವೀಕ್ಷಿಸಲು ಸಿಎಂ ಯಡಿಯೂರಪ್ಪ ಸಿಟಿ ರೌಂಡ್ಸ್ ಹಾಕಿದರು. ಲಾಕ್ ಡೌನ್ ಪರಿಸ್ಥಿತಿಯ ಪರಿಶೀಲನೆ ನಡೆಸಿದ ಯಡಿಯೂರಪ್ಪ, ಹಲವು ಏರಿಯಾಗಳಿಗೆ ಸರ್ಪ್ರೈಸ್ ವಿಸಿಟ್ ಕೊಟ್ಟರು.

ಗೊರಗುಂಟೆ ಪಾಳ್ಯ, ಸುಮನಹಳ್ಳಿ ಸಿಗ್ನಲ್, ಜಯದೇವ ಜಂಕ್ಷನ್, ದೇವೇಗೌಡ ಪೆಟ್ರೋಲ್ ಬಂಕ್ ಜಂಕ್ಷನ್, ಯಶವಂತಪುರ ಪ್ರದೇಶಗಳಲ್ಲಿ ಸಿಎಂ ಯಡಿಯೂರಪ್ಪ ಅನಿರೀಕ್ಷಿತವಾಗಿ ಅಚ್ಚರಿಯ ವಿಸಿಟ್‌ ಕೊಟ್ಟು ಗಮನ ಸೆಳೆದರು. ಕಾವೇರಿ ನಿವಾಸದಿಂದ ತಮ್ಮ ಸಿಟಿ ರೌಂಡ್ಸ್‌ ಆರಂಭಿಸಿದ ಯಡಿಯೂರಪ್ಪ, ಲಾಕ್ ಡೌನ್ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು.

ಖುದ್ದು ಸಿಎಂ ಅವರಿಂದಲೇ ಲಾಕ್ ಡೌನ್ ಪರಿಸ್ಥಿತಿಯ ಅವಲೋಕನ ನಡೆದಿದ್ದು, ಸಂಡೇ ಸ್ಪೆಷಲ್ ಆಗಿತ್ತು. ಯಶವಂತಪುರ ಫ್ಲೈಒರ್ ಬಳಿ ಪೊಲೀಸರ ಜೊತೆಗೆ ಯಡಿಯೂರಪ್ಪ ಮಾತುಕತೆ ನಡೆಸಿದರು. ಲಾಕ್ ಡೌನ್ ಇದ್ರೂ ಜನರು ಓಡಾಟ ನಡೆಸುತ್ತಿರುವ ಹಿನ್ನಲೆಯಲ್ಲಿ ಯಡಿಯೂರಪ್ಪ ತಾವೇ ಖುದ್ದಾಗಿ ಫೀಲ್ಡ್‌ಗೆ ಇಳಿದರು ಎಂದು ತಿಳಿದುಬಂದಿದೆ.

ಪೊಲೀಸರಿಗೂ ಮಾಹಿತಿ ತಿಳಿಸದೇ ಫೀಲ್ಡ್‌ಗೆ ಇಳಿದ ಸಿಎಂ, ಗೊರಗೊಂಟೆ ಪಾಳ್ಯದಲ್ಲೂ ಪೊಲೀಸರಿಂದ ಮಾಹಿತಿ ಸಂಗ್ರಹ ಮಾಡಿದರು. ಕಟ್ಟುನಿಟ್ಟಾಗಿ ಲಾಕ್‌ಡೌನ್‌ ಜಾರಿಗೆ ತರುವ ಕೆಲಸ ಮಾಡುವಂತೆ ಯಡಿಯೂರಪ್ಪ ಸೂಚನೆ ನೀಡಿದರು. ಸುಖಾ ಸುಮ್ಮನೆ ಓಡಾಡುವವ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಯಡಿಯೂರಪ್ಪ ಸೂಚನೆ ನೀಡಿದರು.

ಸುಮನಹಳ್ಳಿ ಬ್ರಿಡ್ಜ್ ಬಳಿಯೂ ಬಿಎಸ್‌ವೈ ಪರಿಶೀಲನೆ ನಡೆಸಿದರು. ಅಲ್ಲಿಯೂ ಕೂಡಾ ಯಡಿಯೂರಪ್ಪ ಪೊಲೀಸರಿಂದ ಮಾಹಿತಿ‌ ಸಂಗ್ರಹ ಮಾಡಿದರು. ಸುಖಾಸುಮ್ಮನೆ ಓಡಾಡುವವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡುವಂತೆ ಸೂಚನೆ ನೀಡಿದರು.

ಸಿಎಂಗೆ ವ್ಯಾಪಾರಿಗಳಿಂದ ದೂರುಗಳ ಸುರಿಮಳೆ

ವ್ಯಾಪಾರ ಕಮ್ಮಿಯಾಗಿದೆ, ಪೊಲೀಸರು ಪಾಸ್ ಕೊಡ್ತಿಲ್ಲ ಎಂಬ ಹಲವು ದೂರುಗಳನ್ನು ಸಿಎಂ ಭೇಟಿ ವೇಳೆ ವ್ಯಾಪಾರಿಗಳು ಸಲ್ಲಿಸಿದರು. ಪೊಲೀಸರು ಅಂಡಗಿ ತೆಗೆಯಲು ಬಿಡ್ತಿಲ್ಲ ಎಂದು ವ್ಯಾಪಾರಿಗಳು ಸಿಎಂ ಬಳಿ ಅಳಲು ತೋಡಿಕೊಂಡರು. ಇತ್ತ ಸಾರ್ವಜನಿಕರು ಲಾಕ್ ಡೌನ್ ನಿರ್ಧಾರ ಒಳ್ಳೆಯದು ಎಂದರು. ಸರ್ಕಾರದ ಕ್ರಮ ಚನ್ನಾಗಿದೆ ಎಂದು ಸಾರ್ವಜನಿಕರು ಸಿಎಂಗೆ ಹೊಗಳಿದರು.

Comments are closed.