ಕರ್ನಾಟಕ

ರಾಜ್ಯಾದ್ಯಂತ ಸಡಿಲಗೊಳ್ಳುತ್ತಿರುವ ಲಾಕ್‌ಡೌನ್‌ ಆದೇಶ; ಹೆಚ್ಚಿದ ಭೀತಿ

Pinterest LinkedIn Tumblr


ಬೆಂಗಳೂರು: ಲಾಕ್‌ಡೌನ್‌ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಹೊಣೆಗಾರಿಕೆ ನಡು ವೆಯೇ ಅಗತ್ಯ ವಸ್ತುಗಳ ಸಾಗಣೆ, ಮಾರಾಟ, ಖರೀದಿ ಗಾಗಿ ರಾಜ್ಯಾದ್ಯಂತ ನೀಡಿರುವ ವಿನಾಯಿತಿ ಅಪಾಯ ತಂದೊಡ್ಡಬಹುದಾ ಎಂಬ ಆತಂಕ ಸೃಷ್ಟಿ ಸಿದೆ.

ಅಗತ್ಯ ಉದ್ದೇಶಗಳಿಗೆ ಈ ಸಡಿಲಿಕೆ ಮಾಡಲಾಗಿದ್ದು ಈಗ ಅನಗತ್ಯ ಉದ್ದೇಶಗಳಿಗೂ ವಿಸ್ತರಣೆ ಆಗುತ್ತಿದೆ. ರೇಷ್ಮೆ ಮಾರುಕಟ್ಟೆಯ ಪುನಾರಂಭ, ಉಚಿತ ಹಾಲು ವಿತರಣೆ, ಕೆಲವೆಡೆ ಪರಿಣಾಮಕಾರಿಯಾಗಿ ಜಾರಿಯಾಗದ ತಪಾಸಣೆ… ಇಂಥ ಹಲವು ಅಂಶಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತೊಡಕಾಗುತ್ತಿವೆ. ಇದು ಮತ್ತೂಂದು ಸಮಸ್ಯೆಗೆ ಕಾರಣವಾಗಬಹುದು ಎಂಬ ಕಳವಳವನ್ನು ಸೃಷ್ಟಿಸಿದೆ.

ಎಪಿಎಂಸಿ ಮಾರುಕಟ್ಟೆಗಳು, ಹಣ್ಣು ಮತ್ತು ತರಕಾರಿ ಮಾರುಕಟ್ಟೆಗಳು, ಆಹಾರ ಧಾನ್ಯ ಮಾರಾಟ ಮಂಡಿಗಳು ತೆರೆದುಕೊಂಡಿರುವುದರಿಂದ ಸಹಸ್ರಾರು ಸಂಖ್ಯೆಯಲ್ಲಿ ರೈತರು, ವರ್ತಕರು, ಸಗಟು ಮತ್ತು ಚಿಲ್ಲರೆ ವ್ಯಾಪಾರಸ್ಥರು, ಸಾರ್ವಜನಿಕರು ದೊಡ್ಡ ಪ್ರಮಾಣದಲ್ಲೇ ಬರುತ್ತಿದ್ದಾರೆ. ಕೇರಳ ಗಡಿ ಹೊರತುಪಡಿಸಿ ರಾಜ್ಯದ ಎಲ್ಲ ಗಡಿಗಳನ್ನೂ ಆಹಾರ ಧಾನ್ಯ, ಹಣ್ಣು ಮತ್ತು ತರಕಾರಿ ಸಾಗಣೆಗೆ ಮುಕ್ತಗೊಳಿಸಲಾಗಿದೆ. ಹೀಗಾಗಿ ಕಳೆದ ಮೂರು ದಿನಗಳಿಂದ ವಾಹನ ಸಂಚಾರವೂ ಹೆಚ್ಚಾಗಿದೆ. ಆ ವಾಹನಗಳಲ್ಲಿ ಕೂಲಿ ಕಾರ್ಮಿಕರು, ರೈತರು, ವ್ಯಾಪಾರಸ್ಥರು ಬರುತ್ತಿದ್ದಾರೆ. ಇದರಿಂದಾಗಿ ಕೆಲವು ನಗರ ಮತ್ತು ಪಟ್ಟಣಗಳಲ್ಲಿ ಮಾರುಕಟ್ಟೆ, ವ್ಯಾಪಾರ ಮಳಿಗೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಜನರ ಓಡಾಟವೂ ಇದೆ.

ಇದರ ಜತೆಗೆ ಸರಕಾರವೇ ಕೆಎಂಎಫ್‌ನಿಂದ ಹಾಲು ಖರೀದಿಸಿ ಕೊಳೆಗೇರಿಗಳು ಮತ್ತು ಬಡವರ ಕಾಲನಿಗಳಲ್ಲಿ ವಿತರಿಸುತ್ತಿದೆ. ಹಾಲು ಪಡೆಯಲು ಜನರು ನಿತ್ಯ ಬೆಳಗ್ಗೆ ಮುಗಿ ಬೀಳುತ್ತಿದ್ದು ಅಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಮತ್ತೂಂದೆಡೆ ಸರಕಾರವು ಕೃಷಿ ಪರಿಕರಗಳ ಸರಬರಾಜಿಗೆ ತೊಂದರೆಯಾಗದಂತೆ ಅಗತ್ಯ ಇದ್ದವರಿಗೆ ಗ್ರೀನ್‌ ಪಾಸ್‌ ನೀಡಲು ಜಿಲ್ಲಾ ಕೃಷಿ ನಿರ್ದೇಶಕರಿಗೆ ಸೂಚನೆ ನೀಡಿದೆ. ಆ ಪಾಸ್‌ ಪಡೆಯಲು ಜಿಲ್ಲೆ ಮತ್ತು ತಾಲೂಕುಗಳಲ್ಲಿ ಜನರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಲಾಕ್‌ಡೌನ್‌ನ ಮೂಲ ಉದ್ದೇಶ ಕೆಲವು ಕಡೆಯಷ್ಟೇ ಪಾಲನೆಯಾಗುತ್ತಿದ್ದು ಶೇ. 80ರಷ್ಟು ಕಡೆ ಪಾಲನೆ ಯಾಗುತ್ತಿಲ್ಲ. ಲಾಕ್‌ಡೌನ್‌ ಅವಧಿ ಮುಗಿಯುವ 2 ವಾರಗಳಿಗೂ ಮುನ್ನವೇ ಹಲವಾರು ವಿನಾ ಯಿತಿಗಳನ್ನು ಘೋಷಿಸಲಾಗಿದ್ದು ಎಲ್ಲೆಲ್ಲೂ ಜನಜಂಗುಳಿ ಕಂಡುಬರತೊಡಗಿದೆ. ನಿರ್ಬಂಧಗಳ ಬಿಗಿ ಈ ಮಾದರಿಯಲ್ಲಿ ಸಡಿಲಗೊಂಡರೆ ಕೋವಿಡ್ 19 ವೈರಸ್‌ ಹರಡುವುದನ್ನು ನಿಯಂತ್ರಿಸುವುದು ಕಷ್ಟಸಾಧ್ಯವೇ ಸರಿ.

ಅಗತ್ಯ ವಸ್ತುಗಳ ಸಾಗಣೆಗಾಗಿ ಮಾತ್ರವೇ ಲಾಕ್‌ಡೌನ್‌ನಿಂದ ವಿನಾ ಯಿತಿ ನೀಡಲಾಗಿದೆ. ಇದರ ದುರುಪಯೋಗ ಸಲ್ಲ. ಮಾರುಕಟ್ಟೆ, ಮಂಡಿಗಳ ಬಳಿ ಜನಜಂಗುಳಿ ಸೇರಬಾರದು. ಸರಕಾರದ ವತಿಯಿಂದಲೇ ಹಣ್ಣು ತರಕಾರಿ ಖರೀದಿಸಿ ಸಾರ್ವಜನಿಕರಿಗೆ ನೇರ ಮಾರಾಟ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ, ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
-ಎಸ್‌.ಟಿ.ಸೋಮಶೇಖರ್‌, ಸಹಕಾರ ಸಚಿವ

ಅಗತ್ಯ ವಸ್ತುಗಳ ಸಾಗಣೆ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದರಿಂದ ಎಪಿಎಂಸಿ ಮಾರುಕಟ್ಟೆಗಳಲ್ಲಿ ಜನ ಸೇರುವಂತಾಗಿದೆ. ಆದರೆ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಜನರ ಹಿತಕ್ಕಾಗಿ ಲಾಕ್‌ಡೌನ್‌ ಜಾರಿಯಾಗಿದೆ. ಅಗತ್ಯ ವಸ್ತು ಗಳಿಗಾಗಿ ಜನರು ಸಂಕಷ್ಟ ಪಡಬಾರದು ಎಂದು ಕೆಲವು ವಿನಾಯಿತಿಗಳನ್ನು ನೀಡಲಾಗಿದೆ.
-ಬಿ.ಸಿ.ಪಾಟೀಲ್‌ , ಕೃಷಿ ಸಚಿವ

Comments are closed.