ಕರ್ನಾಟಕ

ದಿಲ್ಲಿಯ ನಿಜಾಮುದ್ದೀನ್ ನಿಂದ ಬಂದ ಬೀದರ್ ನ 11 ಜನರಿಗೆ ಕೋವಿಡ್-19 ಸೋಂಕು ಪತ್ತೆ

Pinterest LinkedIn Tumblr


ಬೀದರ್: ದೆಹಲಿಯ ನಿಜಾಮುದ್ದೀನ್ ಜಮಾತ್ ಸಭೆ ಇದೀಗ ಗಡಿ ಜಿಲ್ಲೆ ಬೀದರ್ ನಲ್ಲಿ ತಲ್ಲಣ ಸೃಷ್ಟಿಸಿದ್ದು, ದೆಹಲಿಯಿಂದ ಬೀದರ್ ಗೆ ಆಗಮಿಸಿರುವ 11 ಜನರಿಗೆ ಕೋವಿಡ್-19 ಸೋಂಕು ಪಾಸಿಟಿವ್ ಇರುವುದು ಖಚಿತವಾಗಿದೆ.

ನಿಜಾಮುದ್ದೀನ್ ಸಭೆಗೆ ತೆರಳಿದ್ದ 27 ಜನರ ಪೈಕಿ 11 ಶಂಕಿತರಲ್ಲಿ ಸೋಂಕು ಖಚಿತವಾಗಿದ್ದು ಉಳಿದ 16 ವರದಿ ಬರಬೇಕಿದೆ ಜಿಲ್ಲಾಧಿಕಾರಿ ಡಾ.‌ಮಹಾದೇವ ಹೇಳಿದ್ದಾರೆ.

ಸೋಂಕಿತ 11ರಲ್ಲಿ 9 ಜನ ಬೀದರ್ ನ ಓಲ್ಡ್ ಸಿಟಿ ನಿವಾಸಿಗಳಾಗಿದ್ದರೆ ಒಬ್ಬರು ಬಸವಕಲ್ಯಾಣ, ಇನ್ನೊಬ್ಬರು ಚಿಟಗುಪ್ಪ ತಾಲೂಕಿನ ಮನ್ನಾಎಖ್ಖೇಳಿ ನಿವಾಸಿ ಆಗಿದ್ದಾರೆ.

ಸೋಂಕಿತರು ಇರುವ ಪ್ರದೇಶಗಳಲ್ಲಿ ಕಟ್ಟೆಚ್ಚರ ಹಾಗೂ ಇವರು ಸಂಪರ್ಕಿಸಿದ ಜನರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಡಿಸಿ ತಿಳಿಸಿದ್ದಾರೆ.

ಬೀದರ್ ಜಿಲ್ಲೆಯಲ್ಲಿ ‌ಈವರೆಗೆ ಒಂದೂ ಪಾಸಿಟಿವ್ ಪ್ರಕರಣ ವರದಿಯಾಗದಿದ್ದರಿಂದ ಜನ ನಿಟ್ಟಿಸಿರು ಬಿಟ್ಟಿದ್ದರು. ಆದರೆ, ನಿಜಾಮುದ್ದೀನ್ ಮರ್ಕಜ್‌ ಜಮಾತ್ ತಂದಿರುವ ಆಪತ್ತು ಜಿಲ್ಲೆಯಲ್ಲಿ ಆತಂಕ ಹೆಚ್ಚಿಸಿದೆ. ಸೋಂಕಿತರ ಸಂಖ್ಯೆ‌ ಇನ್ನೂ ಹೆಚ್ಚಳ ಸಾಧ್ಯತೆಯೂ ಇದೆ.

Comments are closed.