ಕರ್ನಾಟಕ

ಲೌಕ್ ಡೌನ್: ಹಾಲು ಖರೀದಿ ಮಾಡದಿರಲು ಶಿಮೂಲ್ ನಿರ್ಧಾರ

Pinterest LinkedIn Tumblr


ಶಿವಮೊಗ್ಗ: ದೇಶವ್ಯಾಪಿ ಲಾಕ್ ಡೌನ್ ನಿಂದಾಗಿ ಹೈನುಗಾರಿಕೆಯ ಮೇಲು ಪರಿಣಾಮ ಬೀರಿದ್ದು, ಇದೀಗ ಇಂದು ಸಂಜೆ ಮತ್ತು ನಾಳೆ ಬೆಳಿಗ್ಗೆ ರೈತರಿಂದ ಹಾಲು ಖರೀದಿ ಮಾಡದೇ ಇರಲು ಶಿಮೂಲ್ ನಿರ್ಧರಿಸಿದೆ.

ದಕ್ಷಿಣ ಕನ್ನಡ ಮತ್ತು ಉಡಪಿ ಒಕ್ಕೂಟ ಎರಡು ದಿನ ಹಾಲು ಖರೀದಿ ಮಾಡದೇ ಇರಲು ನಿರ್ಧರಿಸಿದ ಬೆನ್ನಲ್ಲೇ ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆ ಹಾಲು ಒಕ್ಕೂಟದಿಂದ ಈ ನಿರ್ಧಾರ ಪ್ರಕಟವಾಗಿದೆ.

ಮಾರಾಟ ಕುಸಿತ ಹಾಗೂ ಹೊರ ರಾಜ್ಯಕ್ಕೆ ಹಾಲು ಸರಬರಾಜು ಸ್ಥಗಿತವಾದ ಹಿನ್ನಲೆ ಶಿಮೂಲ್ ನಿಂದ ಕ್ರಮ ಕೈಗೊಳ್ಳಲಾಗಿದ್ದು, ರವಿವಾರ ಸಂಜೆ ಹಾಗೂ ಸೋಮವಾರ ಬೆಳಿಗ್ಗೆ ಹಾಲು ಖರೀದಿ ಮಾಡದಿರಲು ನಿರ್ಧಾರ ಮಾಡಲಾಗಿದೆ.

ಹಾಲಿನ ಸಂಗ್ರಹ ಜಾಸ್ತಿಯಾದ ಹಿನ್ನೆಲೆ ರೈತರಿಂದ ಹಾಲು ಖರೀದಿಸದಿರಲು ಸಂಸ್ಥೆ ನಿರ್ಧರಿಸಿದ್ದು, ಆದರೆ ಇದು ರೈತರನ್ನು ಸಂಕಷ್ಟಕ್ಕೆ ಈಡುಮಾಡಿದೆ.

ಪ್ರತಿನಿತ್ಯ ಮೂರು ಜಿಲ್ಲೆಯ ರೈತರಿಂದ ಸುಮಾರು 5.20 ಲಕ್ಷ ಲೀಟರ್ ನಷ್ಟು ಹಾಲು ಸಂಗ್ರಹವಾಗುತ್ತಿತ್ತು. ಇದರಲ್ಲಿ 2.50 ಲಕ್ಷ ಲೀಟರ್ ಅನ್ನು ದಿನನಿತ್ಯ ಮಾರಾಟವಾಗುತ್ತಿತ್ತು. ನೆರೆಯ ರಾಜ್ಯ ತೆಲಂಗಾಣಕ್ಕೆ ಪ್ರತಿನಿತ್ಯ 1 ಲಕ್ಷ ಲೀಟರ್ ಹಾಲು ಪೂರೈಕೆ ಮಾಡುತ್ತಿದ್ದರೆ, ಉಳಿದ ಹಾಲನ್ನು ಪೌಡರ್ ಮತ್ತಿತರ ಉತ್ಪನಗಳ ತಯಾರಿಕೆಗೆ ಪೂರೈಕೆ ಮಾಡಲಾಗುತ್ತಿತ್ತು.

ಆದರೆ ಲೌಕ್ ಡೌನ್ ನಂತರ ಶಿಮೂಲ್ ಮಾರಾಟ 1.90 ಲಕ್ಷ ಲೀಟರ್ ಗೆ ಕುಸಿದಿದ್ದು, ಹೊರ ರಾಜ್ಯಕ್ಕೆ ಸರಬರಾಜು ಮಾಡುತ್ತಿದ್ದ ಹಾಲು ಕೂಡಾ ಸ್ಥಗಿತವಾಗಿದೆ. ಪ್ರತಿನಿತ್ಯ 60 ಸಾವಿರ ಲೀಟರ್ ಶಿಮೂಲ್ ನಲ್ಲೇ ಉಳಿಯುತ್ತಿರುವ ಹಿನ್ನಲೆಯಲ್ಲಿ ರೈತರಿಂದ ಖರೀದಿಸದಿರಲು ನಿರ್ಧಾರ ಮಾಡಲಾಗಿದೆ.

Comments are closed.