ಕರ್ನಾಟಕ

Corona Watch ಆ್ಯಪ್ ರಿಲೀಸ್ ಮಾಡಿದ ಕರ್ನಾಟಕ ಆರೋಗ್ಯ ಇಲಾಖೆ

Pinterest LinkedIn Tumblr

ಬೆಂಗಳೂರು: ಕೊರೋನಾ ವೈರಸ್ ಸೋಂಕಿನ ವಿಚಾರ ಜನಸಾಮಾನ್ಯರಿಗೆ ಸಾಕಷ್ಟು ಆತಂಕದ ಜೊತೆ ಗೊಂದಲವನ್ನೂ ಮೂಡಿಸುತ್ತಿದೆ. ಕೆಲವೊಮ್ಮೆ ಅಧಿಕೃತ ಮಾಹಿತಿಯ ಕೊರತೆಯಿಂದಾಗಿ ವಾಟ್ಸಾಪ್​ಗಳಲ್ಲಿ ಬರುವ ಅಂಶಗಳು ಜನರ ದಾರಿ ತಪ್ಪಿಸುವ ಸಾಧ್ಯತೆ ಇರುತ್ತವೆ. ಇದರಿಂದ ಕೊರೋನಾ ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಬಹುದು. ಈ ಹಿನ್ನೆಲೆಯಲ್ಲಿ ಜನರಿಗೆ ನೈಜ ರೀತಿಯಲ್ಲಿ ಸಹಾಯ ಮಾಡುವ ಉದ್ದೇಶದಿಂದ ಆ್ಯಪ್ ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ಆರೋಗ್ಯ ಇಲಾಖೆ ಇದೀಗ Corona Watch ಆ್ಯಪ್ ರಿಲೀಸ್ ಮಾಡಿದೆ. ಆಂಡ್ರಾಯ್ಡ್ ಅವತರಣಿಕೆಯಲ್ಲಿರುವ ಈ ಆ್ಯಪ್ ಸದ್ಯಕ್ಕೆ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಲಭ್ಯವಿದೆ. KSRSAC KGIC ಈ ಆ್ಯಪ್ ತಯಾರಿಸಿದೆ. ಪ್ಲೇಸ್ಟೋರ್​ನಲ್ಲಿ ಹಲವು ಕೊರೋನಾ ಆ್ಯಪ್​ಗಳು ಲಭ್ಯವಿರುವುದರಿಂದ ಜನರು ಮೇಲಿನ ತಯಾರಕರ ಹೆಸರು ನೋಡಿ ಡೌನ್ ಲೋಡ್ ಮಾಡಿಕೊಳ್ಳಬೇಕಾಗುತ್ತದೆ.

ಕೋರೊನಾ ವಾಚ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು ಲಿಂಕ್ ಇಲ್ಲಿದೆ‌‌:
https://www.karnataka.gov.in/
ಅಥವಾ
https://play.google.com/store/apps/details?id=com.ksrsac.drawshapefileಈ ಆ್ಯಪ್​ನಲ್ಲಿ ಸೋಂಕಿತ ರೋಗಿಗಳ ಮಾರ್ಗ ನಕ್ಷೆಗಳು; ಕೊರೋನಾ ಚಿಕಿತ್ಸೆ ನೀಡುವ ಆಸ್ಪತ್ರೆಗಳು, ಸಹಾಯವಾಣಿ ಸಂಖ್ಯೆ ಸೇರಿದಂತೆ ವಿವಿಧ ರೀತಿಯ ಮಾಹಿತಿ ಇದೆ.

Comments are closed.