
ಬೆಂಗಳೂರು: ಕೋವಿಡ್-19 ಸೋಂಕು ವಿರುದ್ಧದ ಹೋರಾಟಕ್ಕೆ ದೇಶವೇ ಲಾಕ್ ಡೌನ್ ಸ್ಥಿತಿಯಲ್ಲಿರುವ ಕಾರಣ ಬಸ್ ಸಂಚಾರವನ್ನು ಸಂಪೂರ್ಣ ರದ್ದುಪಡಿಸಲಾಗಿದೆ. ಈ ಮಧ್ಯೆ ಅಗತ್ಯ ಸೇವೆ ನೀಡುವವರಿಗಾಗಿ ಬಿಎಂಟಿಸಿಯ ಕೆಲ ಬಸ್ ಗಳ ಸಂಚಾರ ಇಂದಿನಿಂದ ಆರಂಭವಾಗಿದೆ.
ಬಿಎಂಟಿಸಿ 180 ಬಸ್ ಗಳನ್ನು ರಸ್ತೆಗಿಳಿಸಿದ್ದು, ಇದು ಕೇವಲ ಅಗತ್ಯ ಸೇವೆ ನೀಡುವವರಿಗೆ ಮಾತ್ರ ಎನ್ನಲಾಗಿದೆ. ಆಸ್ಪತ್ರೆ ಸಿಬ್ಬಂದಿ, ಪತ್ರಕರ್ತರು, ಸೆಕ್ಯುರಿಟಿ ಗಾರ್ಡ್, ರಕ್ತದಾನ ಮಾಡುವವರು , ಬ್ಯಾಂಕ್ ಸಿಬ್ಬಂದಿಗಳಿಗೆ ಈ ಬಸ್ ಗಳಲ್ಲಿ ಸಂಚರಿಸಲು ಅನುಕೂಲ ಮಾಡಲಾಗಿದೆ.
ಲಾಕ್ ಡೌನ್ ಆದೇಶವಿರುವ ಕಾರಣ ಸಾರ್ವಜನಿಕರಿಗೆ ಬಸ್ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ. ತುರ್ತು ಸೇವೆ ನೀಡುವ ಸಿಬ್ಬಂದಿ ತಮ್ಮ ಗುರುತಿನ ಚೀಟಿ ತೋರಿಸಿ ಪ್ರಯಾಣ ಮಾಡಬಹುದಾಗಿದೆ. 42 ಸೀಟ್ ಗಳಿರುವ ಬಸ್ ನಲ್ಲಿ 20 ಜನರಿಗಷ್ಟೇ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಇದರಿಂದ ಅಂತರ ಕೈಗೊಳ್ಳುವ ವ್ಯವಸ್ಥೆ ಮಾಡಲಾಗಿದೆ.
Comments are closed.