
ಕಲಬುರಗಿ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 16 ರಿಂದ ಸ್ಥಗಿತವಾಗಿದ್ದ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ವಹಿವಾಟು ಮಾರ್ಚ್ 27 ರಿಂದ ಮತ್ತೆ ಶುರುವಾಗುತ್ತಿದೆ.
ವಹಿವಾಟು ನಡೆದರೆ ಜನ ಜಂಗುಳಿ ಸೇರಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ವಹಿವಾಟು ರದ್ದುಪಡಿಸಲಾಗಿತ್ತು. ಆದರೆ ಅವಶ್ಯಕ ವಸ್ತುಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಿರ್ಧಾರದಂತೆ ವಹಿವಾಟು ಮತ್ತೆ ಪ್ರಾರಂಭಿಸುತ್ತಿರುವುದಾಗಿ ಎಪಿಎಂಸಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಎಪಿಎಂಸಿ ಪ್ರಾಂಗಣದಲ್ಲಿ ತೊಗರಿ ಮತ್ತು ಕಡಲೆ ಮಾತ್ರ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ. ಈ ನಿಯಮ ಮೀರಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಕಾರ್ಯದರ್ಶಿ ಎಚ್ಚರಿಕೆ ನೀಡಿದ್ದಾರೆ.
ಮಾಸ್ಕ ಕಡ್ಡಾಯವಾಗಿ ಧರಿಸುವಂತೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಜತೆಗೆ ಶುಚಿತ್ವದ ಎಲ್ಲ ನಿಯಮಗಳನ್ನು ಪಾಲಿಸುವಂತೆ ನಿರ್ದೆಶಿಸಲಾಗಿದೆ.
400 ಲೈಸನ್ಸ ವರ್ತಕರು: ಕಲಬುರಗಿ ಎಪಿಎಂಸಿಯಲ್ಲಿ 400 ಅನುಮತಿ ವರ್ತಕರಿದ್ದಾರೆ. ಇವರೆಲ್ಲರೂ, ಇವರಷ್ಟೇ ಮುನಿಮ್ ದಾರರು ಹಾಗೂ ಒಬ್ಬ ವರ್ತಕರಿಗೆ ಒಬ್ಬ ಹಮಾಲುದಾರರು ಬಂದರೆ ಕನಿಷ್ಟ 1500 ಜನರು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತಾಗುತ್ತದೆ. ಬಹುಮುಖ್ಯ ವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ತೂಕ ಮಾಡಲಿಕ್ಕಾಗುವುದಿಲ್ಲ. ಇದರಿಂದ ವರ್ತಕರಲ್ಲಿ ಕೊರೊನೊ ಭೀತಿ ಆತಂಕ ಕಾಡಲಾರಂಭಿಸಿದೆ.
ಬೆಂಬಲ ಬೆಲೆಯಲ್ಲಿ ಕಳೆದ ಹಾಗೂ ಹಿಂದಿನ ವರ್ಷ ಖರೀದಿ ಮಾಡಲಾದ 15 ಲಕ್ಷ ಕ್ವಿಂಟಾಲ್ ಅಧಿಕ ಹಾಗೂ ಪ್ರಸ್ತುತವಾಗಿ ಖರೀದಿಸಲಾದ 6 ಲಕ್ಷ ಕ್ವಿಂಟಾಲ್ ತೊಗರಿ ದಾಸ್ತಾನು ಗಳಲ್ಲಿ ಕೊಳೆಯುತ್ತಿದೆ. ಇದನ್ನು ವಿಲೇವಾರಿ ಮಾಡಿದರೆ ಎಪಿಎಂಸಿ ವಹಿವಾಟು ನಡೆಸುವ ಪ್ರಶ್ನೆಯೇ ಎದುರಾಗುವುದಿಲ್ಲ. ಅದಲ್ಲದೇ ಗ್ರಾಮೀಣ ಭಾಗದಿಂದ ರೈತರು ತೊಗರಿ ತರಲಿಕ್ಕಾಗುವುದಿಲ್ಲ.
ಎಪಿಎಂಸಿ ವಹಿವಾಟು ಶುರುವಾದರೆ ಕೊರೊನೊ ಭೀತಿ ತಡೆಯುವ ಕಾರ್ಯಕ್ಕೆ ತೊಂದರೆಯಾಗಬಹುದು ಎಂದು ಮಾರುಕಟ್ಟೆ ಯ ವರ್ತಕರ ಸಂಘದ
ಸಂತೋಷ ಲಂಗರ್ ಆತಂಕ ವ್ಯಕ್ತಪಡಿಸಿದ್ದಾರೆ
Comments are closed.