ಕರ್ನಾಟಕ

ಶೋಕಿಗಾಗಿ ಕಳ್ಳತನ ಮಾಡುತ್ತಿದ್ದವರ ಬಂಧನ

Pinterest LinkedIn Tumblr


ಮೈಸೂರು: ಶೋಕಿಗಾಗಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಸದಸ್ಯರನ್ನು ಮೈಸೂರು ಉದಯಗಿರಿ ಠಾಣೆಯ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಮೂವರು ಖತರ್ನಾಕ್ ಮನೆಗಳ್ಳರು ಸೇರಿದಂತೆ 6 ಜನರ ಬಂಧಿಸಿದ್ದು, ಸೈಯದ್ ಅಲೀಂ (30) ಉಮ್ಮರ್ ಪಾಷಾ (30) ವಸೀಂ ಪಾಷಾ (27) ಬಂಧಿತ ಮನೆಗಳ್ಳರು. ಕಳುವು ಮಾಲುಗಳನ್ನು ಮಾರಾಟ ಮಾಡಲು ಸಹಕರಿಸಿದ ಮಂಜುನಾಥ್, ಆಧಿಲ್ ಪಾಷಾ ಹಾಗೂ ಅರ್ಧ ಬೆಲೆಗೆ ಚಿನ್ನಾಭರಣ ಖರೀದಿಸುತ್ತಿದ್ದ ದೇವೇಂದ್ರ ಸಿಂಗ್ ನನ್ನು ಬಂಧಿಸಲಾಗಿದೆ. ಒಟ್ಟು 7 ಮನೆ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.

ಬಂಧಿತರಿಂದ 11 ಲಕ್ಷ ರೂ. ಮೌಲ್ಯದ 220 ಗ್ರಾಂ. ಚಿನ್ನಾಭರಣ, 3 ಲಕ್ಷ ರೂ. ಮೌಲ್ಯದ 5 ಕೆ.ಜಿ. ಬೆಳ್ಳಿ ಪದಾರ್ಥಗಳು ಹಾಗೂ 3 ಲಕ್ಷ ರೂ. ಮೌಲ್ಯದ ಡೈಮಂಡ್ ಆಭರಣ, ಕೃತ್ಯಕ್ಕೆ ಬಳಸಿದ ಆಟೋ ಹಾಗೂ ಕಳವು ಮಾಲನ್ನು ಮಾರಾಟ ಮಾಡಿ ಖರೀದಿಸಿದ್ದ ಅಪಾಚಿ ಸ್ಕೂಟರ್ ನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿದ್ದು, ಈ ವೇಳೆ ಶೋಕಿಗಾಗಿ ಕಳವು ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಕಳವು ಮಾಡಿದ ಹಣದಿಂದ ಆರೋಪಿಗಳು ಗೋವಾ, ಮುಂಬೈಗೆ ತೆರಳಿ ಶೋಕಿ ಮಾಡುತ್ತಿದ್ದರು. ಈ ಹಿಂದೆ ಉದಯಗಿರಿ, ಮಂಡಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಜೈಲು ವಾಸ ಅನುಭವಿಸಿದ್ದರು. ಇದೀಗ ಉದಯಗಿರಿ ಇನ್ಸ್ ಪೆಕ್ಟರ್ ಪೂಣಚ್ಚ ಹಾಗೂ ಸಬ್ ಇನ್ಸ್ ಪೆಕ್ಟರ್ ಜೈ ಕೀರ್ತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

Comments are closed.