
ಶಿವಮೊಗ್ಗ: ಹಲ್ಲೆ ಪ್ರಕರಣದ ಸಂಬಂಧ ಕೋರ್ಟ್ ಗೆ ಸಾಕ್ಷ್ಯ ಹೇಳಲು ಬಂದ ವ್ಯಕ್ತಿ ವಕೀಲರನ್ನು ನಿಂದಿಸಿ ಜೈಲುಸೇರಿದ ಘಟನೆ ಶಿವಮೊಗ್ಗದ 3ನೇ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಗುರುವಾರ ನಡೆದಿದೆ.
ಹಲ್ಲೆ ಪ್ರಕರಣದಲ್ಲಿ ಶಂಕರ್ ಎಂಬ ವ್ಯಕ್ತಿ ಇಲ್ಲಿನ 3ನೇ ಜೆಎಂಎಫ್ ಸಿ ಕೋರ್ಟ್ ನಲ್ಲಿ ಸಾಕ್ಷ್ಯ ಹೇಳಲು ಆಗಮಿಸಿದ್ದರು. ಕೋರ್ಟ್ ಕಟಕಟೆಯಲ್ಲಿ ನಿಂತು ಸಾಕ್ಷಿ ಹೇಳುತ್ತಿದ್ದ ವೇಳೆ ಕಕ್ಷಿದಾರರ ಪರ ವಕೀಲ ನಯಾಜ್ ಅವರನ್ನು ನೀವು ಪಾಕಿಸ್ತಾನದವರು ಎಂದು ನಿಂದಿಸಿರುವುದಾಗಿ ವರದಿ ತಿಳಿಸಿದೆ.
ಕೋರ್ಟ್ ಕಟಕಟೆಯಲ್ಲಿ ನಿಂದಿಸಿದ ಶಂಕರ್ ವಿರುದ್ಧ ವಕೀಲ ನಯಾಜ್ ಕೂಡಲೇ ನ್ಯಾಯಾಧೀಶೆ ಜ್ಯೋತಿ ಪಾಟೀಲ್ ಅವರಿಗೆ ದೂರು ನೀಡಿದ್ದರು.
ಸಾಕ್ಷಿ ಹೇಳಲು ಬಂದು ನಿಂದಿಸಿದ ಶಂಕರ್ ಗೆ ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನದಲ್ಲಿ ಇರುವಂತೆ ಜಡ್ಜ್ ಜ್ಯೋತಿ ಪಾಟೀಲ್ ಅವರು ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.
Comments are closed.